ಫಲಕೋತ್ಸವದ ಸರಣಿ ಮುಗಿದ ಮೇಲೆ ಈಗ ವಿಚಿತ್ರ ರೀತಿಯ ಕಸದ ಬುಟ್ಟಿಗಳ ಸರಣಿಯನ್ನು ಪ್ರಾರಂಭಿಸುತ್ತಿದ್ದೇವೆ. ಬೇಕಲ್ ಕೋಟೆಯಲ್ಲಿ ಕಂಡ ಈ ವಿಚಿತ್ರ ಫೋಟೋ ಕಳಿಸಿದವರು ಶ್ರೀಕಾಂತ್. ಅದು ಯಾವ ಪುರುಷಾರ್ಥಕ್ಕೆ ಕಸದ ಬುಟ್ಟಿಗೆ ಬಲೆ ಹಾಕಲಾಗಿದೆ ಎಂಬ ರಹಸ್ಯ ಭೇದಿಸಲಾಗಿಲ್ಲ :P
ಮೊದಲೇ ಹೇಳಿಬಿಡ್ತೀನಿ...ಈ ವಿಡಿಯೋ ವಿಚಿತ್ರ ಅಲ್ಲ. ಇದೊಂಥರಾ ಚೆನ್ನಾಗಿರೋ ವೀಡಿಯೋ. ಇದರಲ್ಲಿ ನಾವು ತುಂಬಾ ಕಲಿಯೋದಿದೆ ಅನ್ನಿಸಿತು ನನಗೆ ಈ ವಿಡಿಯೋ ತೆಗೆಯುವಾಗ. ಕಾಗೆಗಳು ಸತ್ತ ಇಲಿಯನ್ನು ತಿನ್ನುತ್ತಿರುವ ವಿಡಿಯೋ ಇದು. ಇದರಲ್ಲಿ ನಾವು ಗಮನಿಸಬೇಕಾದ ಅಂಶ ಏನೆಂದರೆ, ಒಂದು ಕಾಗೆ ಇಲಿಯ ಮಾಂಸವನ್ನು ಎಳೆದುಕೊಂಡು ಹೋದರೆ, ಬೇರೆ ಕಾಗೆಗಳು ಜಗಳವಾಡದೆ, ಅದನ್ನು ತಿನ್ನುವುದಕ್ಕೆ ಬಿಟ್ಟು, ಅದು ತಿಂದ ಮೇಲೆ ಅವು ಬಾಯಿಹಾಕುತ್ತವೆ. ಆಮೇಲೆ ಅವೆಲ್ಲ round ಹೊಡ್ಕೋತಾ ತಿನ್ನುವುದನ್ನು ನೋಡಲು ಒಂಥರಾ ಮಜವಾಗಿದೆ ! ಪಕ್ಕದ ಮನೆಯ ನಾಯಿಯೊಂದು ರೂಮ್ ನಲ್ಲಿ ಬೊಗಳಿತು. ಅದು ಹೊರಗೆ ಬಂತೆಂದು ತಿಳಿದು ಹೆದರಿ ಪಾಪ ಕಾಗೆಗಳು ಹಾರಿ ಹೋದವು ! ಈ ವಿಡಿಯೋ ನ ತೆಗೆಯುವಾಗ ನನಗೊಂದು ಸುಭಾಷಿತ ನೆನಪಾಯ್ತು :
ಕಾಕ ಆಹ್ವಯತೇ ಕಾಕಾನ್ ಯಾಚಕೋ ನ ತು ಯಾಚಕಾನ್ | ಕಾಕ ಯಾಚಕಯೋರ್ಮಧ್ಯೇ ವರಂ ಕಾಕೋ ನ ಯಾಚಕಃ ||
ಕಾಗೆಗೆ ಆಹಾರ ಸಿಕ್ಕಿದರೆ ಇತರ ಕಾಗೆಗಳನ್ನು ಆಹ್ವಾನಿಸುತ್ತದೆ, ಆದರೆ ಭಿಕ್ಷುಕನಿಗೆ ಊಟ ಸಿಕ್ಕಿದರೆ ಅವನು ಯಾರನ್ನೂ ಆಹ್ವಾನಿಸುವುದಿಲ್ಲ. ಕಾಗೆ ಮತ್ತು ಭಿಕ್ಷುಕರ ಮಧ್ಯೆ ಕಾಗೆಯೇ ಮೇಲು ಹೊರತು ಭಿಕ್ಷುಕನಲ್ಲ ಎಂಬುದು ಈ ಶ್ಲೋಕದ ತಾತ್ಪರ್ಯ.
ಇಷ್ಟು ದಿನ ಬರೀ ತಪ್ಪು ಸ್ಪೆಲ್ಲಿಂಗುಗಳ, ಅಪಾರವಾದ ಅರ್ಥಗಳುಳ್ಳ ಮತ್ತು ಅರ್ಥವೇ ಆಗದಂತಹ ಫಲಕಗಳನ್ನು ಪ್ರದರ್ಶಿಸಿ ಒಂಭತ್ತು ವಾರಗಳ ಫಲಕೋತ್ಸವದ ಪ್ರದರ್ಶನ ನಿಮ್ಮೆಲ್ಲರ ಸಹಕಾರದಿಂದ ಯಶಸ್ವಿಯಾಯ್ತು. ಈ ವಾರದೊಂದಿಗೆ ನಮ್ಮ ಫಲಕೋತ್ಸವದ ಮೊದಲನೆಯ season ಅನ್ನು ಮುಗಿಸುತ್ತಿದ್ದೇವೆ. ಈ ವಾರದ ಚಿತ್ರವನ್ನು ಮೇಲೆ ಹಾಕುವ ಬದಲು ಕೆಳಗೆ ಹಾಕಿದ್ದೇನೆ, ಸ್ವಲ್ಪ "ಭಿನ್ನ" [ :-) ]ವಾಗಿರಲಿ ಅಂತ . ಈ ವ್ಯಕ್ತಿಯ ಕ್ರಿಯಾಶೀಲತೆ ನೋಡಿ ನೀವು ಮೆಚ್ಚದೇ ಇರುವುದಿಲ್ಲ. ಪೈಥಾಗೊರಸ್ಸಿನ ಬಗ್ಗೆ ಕೇಳಿ, ಓದಿ, ಥಿಯೋರಮ್ ಅನ್ನು ಬೈ-ಹಾರ್ಟ್ ಮಾಡಿ ಪಾಸು ಮಾಡಿದ್ದೇವೆ ಅಷ್ಟೆ. ಒಮ್ಮೊಮ್ಮೆ Aptitude testಗಳಲ್ಲಿ ಅದನ್ನು ಬಳಸಿದ್ದೇವೆ . ಆದರೆ ಆ ಹೆಸರು, ಮತ್ತು ಆ ಥಿಯೋರಮ್ ಅನ್ನು ಒಂದು concept-ಆಗಿ ಉಪಯೋಗಿಸಿರುವ ಈ ವ್ಯಕ್ತಿ ನಿಜವಾಗಿಯೂ ಬುದ್ಧಿವಂತನೇ ! ಆದರೆ, ಈ ಫಲಕದಲ್ಲಿ ಕನ್ನಡದಲ್ಲಿ ಪೈಥಾಗೊರಸ್ಸಿನ ಸ್ಪೆಲ್ಲಿಂಗನ್ನು ಬರೆಯುವುದರಲ್ಲಿ ಎಡವಿದ್ದಾನೆ! ಅವನು ಫಲಕದಲ್ಲಿ ಹೇಳಬಯಸುವ ವಿಷಯವನ್ನು ಸರಿಯಾಗಿ ವ್ಯಕ್ತಪಡಿಸಿದ್ದಾನೆ. ಮತ್ತೆ, ಕಲರ್ರು, ಫಾಂಟು, ಎಲ್ಲಾ ಚೆನ್ನಾಗಿದೆ ! ಈ ಬಾರಿ ಇದು ಬರೀ "ವಿಚಿತ್ರ" ಚಿತ್ರವಲ್ಲ,"ವಿಶೇಷ ವಿಚಿತ್ರ " ಚಿತ್ರ .
ನಿಮಗೆಲ್ಲರಿಗೂ ಗೌರಿ ಗಣೇಶರು ಎಲ್ಲವನ್ನೂ "right angle" ಇಂದಲೇ ದಯಪಾಲಿಸಲಿ ಎಂದು ಆಶಿಸುತ್ತೇನೆ. ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಷಯಗಳು.