ನನ್ನ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದ ವಿಚಿತ್ರ ಚಿತ್ರಗಳನ್ನು ಹಾಕಲಿಕ್ಕೆಂದು ಶುರು ಮಾಡಿದ ಈ ಪುಟ್ಟ ಫೋಟೋಬ್ಲಾಗು ಇಂದು ನಿಮ್ಮೆಲ್ಲರ ಪ್ರೋತ್ಸಾಹ, ಕೊಡುಗೆ ಮತ್ತು ಭಾಗವಹಿಸುವಿಕೆಯಿಂದ ಇಂದಿಗೆ ಒಂದು ವರ್ಷ ಪೂರೈಸಿದೆ. ಪರಿಸರಪ್ರೇಮಿ ಅರುಣರ ಕೊಡುಗೆ, ಸಲಹೆ ಮತ್ತು ಮಾರ್ಗದರ್ಶನದಲ್ಲಿ,ಶ್ರೀಕಾಂತ್ ಹಾಗೂ ಶ್ರೀನಿವಾಸ್ ಅವರ ಚಿತ್ರಕೊಡುಗೆಗಳಿಂದ ಶುರುವಾದ ಈ ಬ್ಲಾಗು ಆನಂತರದಲ್ಲಿ ಓದುಗ ಬಾಂಧವರಿಂದ ಕೊಡುಗೆಗಳನ್ನು ಸ್ವೀಕರಿಸುವ ಮಟ್ಟಕ್ಕೆ ಈಗ ಬೆಳೆದು ನಿಂತಿದೆ. ಫಲಕೋತ್ಸವ ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಯಶಸ್ಸನ್ನು ಕಂಡು ಈಗ ಎರಡನೆಯ ಸೀಸನ್ ನಡೆಯುತ್ತಿದೆ. ಈ ಸಂದರ್ಭದಲ್ಲಿ ನಾನು ಬ್ಲಾಗ್ ಯಶಸ್ವಿಯಾಗಲು ಸಹಕರಿಸಿ ಪ್ರೋತ್ಸಾಹಿಸಿದ ನಿಮ್ಮೆಲ್ಲರಿಗೂ ಕೃತಜ್ಞಳಾಗಿದ್ದೇನೆ.
ನಾವು ಫೋಟೋ ತೆಗೆಯಲು ಕ್ಯಾಮೆರಾ ಇರಲೇಬೇಕಲ್ಲವೇ ? ಮೊಬೈಲೋ, ಡಿಜಿಕ್ಯಾಮೋ, ಎಸ್ ಎಲ್ ಆರ್ , ಯಾವುದಿರಲಿ, ನಾನು ಅದಕ್ಕೂ ಕೃತಜ್ಞಳು.ಈ ಸಂದರ್ಭದಲ್ಲಿ ಕ್ಯಾಮೆರಾ ಬೆಳೆದು ಬಂದ ದಾರಿಯ ಒಂದು ಪುಟ್ಟ ಪರಿಚಯ ಮಾಡಿಕೊಳ್ಳುವುದು ಸೂಕ್ತ ಎನಿಸುತ್ತದೆ.
ಕ್ಯಾಮೆರಾದ ಮೊದಲ ರೂಪ ಕ್ಯಾಮೆರಾ ಒಬ್ಸ್ ಕ್ಯೂರಾ (camera obscura). ಇದನ್ನು ಕಂಡುಹಿಡಿದವರು ಇರಾನಿಯನ್ ವಿಜ್ಞಾನಿ Ibn al-Haytham (Alhazen).

ಅಂದಿನಿಂದ ೧೯೯೦ವರೆಗೆ ಆದ ಬೆಳವಣಿಗೆಯನ್ನು
ಈ ಲಿಂಕಿನಲ್ಲಿ ಕಾಣಬಹುದು.
ಡಿಜಿಟಲ್ ಫೋಟೋಗ್ರಫಿಯ ಬಗ್ಗೆ ಹೆಚ್ಚು ಜನಕ್ಕೆ ಗೊತ್ತಿದೆ.ಆದ್ದರಿಂದ ಅದನ್ನು ವಿವರಿಸುವ ಅವಶ್ಯಕತೆಯಿಲ್ಲ ಎಂದುಕೊಳ್ಳುತ್ತೇನೆ.
ಈ ಬ್ಲಾಗಿನ ಉಗಮಕ್ಕೆ ಕಾರಣವಾದ ನನ್ನ ಮೊಬೈಲ್ ಫೋನ್ ಮತ್ತು ನಮ್ಮ ತಂಡದ ಮೊಬೈಲ್ ಫೋನ್ ಗಳು ಹಾಗೂ ಕ್ಯಾಮೆರಾಗಳಿಗೆ, ಮತ್ತು ನಿಮ್ಮೆಲ್ಲರ ಕ್ಯಾಮೆರಾಗಳಿಗೂ ಒಂದೊಂದು ಥ್ಯಾಂಕ್ಸ್ !
ಫೋಟೋ ಕೃಪೆ: ವಿಕಿಪೀಡಿಯಾ.