ನಾವು ಪ್ರಾಣಿ ಚೇಷ್ಟೆ ಸೀರೀಸ್ ಮುಗಿಸಿದ ದಿನ ಸನ್ಮಾನ್ಯ ಮೌನಗಾಳದ ಸುಶ್ರುತ ರವರು ನಮಗೆ ಕಳಿಸಿಕೊಟ್ಟ ಚಿತ್ರಗಳಿವು. ನಾವು ಸೀರೀಸ್ ನಡೆಸುವಾಗ ಕೆಲವು ಕಮೆಂಟುಗಳಲ್ಲಿ ಪ್ರಾಣಿಗಳ ಪ್ಲಾಸ್ಟಿಕ್ ಸೇವನೆ ಬಗ್ಗೆ ವಿಷಾದ, ಅಸಮಾಧಾನಗಳು ವ್ಯಕ್ತವಾಗಿದ್ದವು. ಅದನ್ನು ನಾವೂ ಅನುಮೋದಿಸುತ್ತೇವೆ. ನಂದಿಬೆಟ್ಟದಲ್ಲಿ ಕೋತಿಗಳ ಕಾಟವು ಹೆಚ್ಚೆಂದು ಕೇಳ್ಪಟ್ಟವರು ಈಗ ಅದನ್ನು ಈ ಚಿತ್ರಗಳಲ್ಲಿ ನೋಡಬಹುದು. ಕೋತಿಗಳು ಹೀಗೆ ಉಗ್ರನರಸಿಂಹಗಳಾಗಲು ಕಾರಣವೇನೆಂದು ನಮ್ಮ ಸಹಬ್ಲಾಗಿಗರಾದ ಪರಿಸರಪ್ರೇಮಿ ಅರುಣ್ ಅವರು
ಈ ಲೇಖನದಲ್ಲಿ ವಿವರಿಸುತ್ತಾರೆ. ನಾವೇ ಪ್ರಾಣಿಗಳಿಗೆ ಆಹಾರ ತಿನ್ನಿಸಿ ಅಭ್ಯಾಸ ಮಾಡಿದುದರ ಪರಮಾವಧಿ ಇದೇನೋ ! ಈ ಚಿತ್ರವು ವಿಶೇಷ, ವಿಚಿತ್ರ, ಇವ್ಯಾವ ಹಣೆಪಟ್ಟಿಗೂ ಒಳಪಡದೇ, ನೇರವಾಗಿ ವಿಷಾದದ ಕೆಟೆಗರಿಗೆ ಸೇರತ್ತೆ.

