Tuesday, January 12, 2010

ಹೊಸ ವರ್ಷದ ಶುಭಾಶಯಗಳು

ಚಿತ್ರ ವಿಚಿತ್ರ ಬ್ಲಾಗಿನ ಸಮಸ್ತ ಓದುಗ ಬಾಂಧವರಿಗೂ ಚಿತ್ರ ವಿಚಿತ್ರ ತಂಡದ ನಮಸ್ಕಾರಗಳು. ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಎರಡು ವಾರ ತಡವಾಗಿ ಶುಭಾಶಯ ಕೋರುತ್ತಿರುವುದಕ್ಕೆ ಮತ್ತು ಮೂರು ವಾರಗಳಿಂದ ಬ್ಲಾಗ್ ಅಪ್ ಡೇಟ್ ಆಗದೇ ಇರುವುದಕ್ಕೆ ನಿಮ್ಮಲ್ಲಿ ಕ್ಷಮೆ ಕೋರುತ್ತೇವೆ. ೨೦೦೯ ರ ಕಡೆಯ ದಿನಗಳು ಎಲ್ಲರನ್ನೂ ದುಃಖದಲ್ಲಿ ಮುಳುಗಿಸಿತ್ತು. ಹಾಗಾಗಿ ಬ್ಲಾಗನ್ನು ಅಪ್ ಡೇಟ್ ಮಾಡಿರಲಿಲ್ಲ. ಒಂದು ವಾರ ದುಃಖ ಇತ್ತು. ಇನ್ನೆರಡು ವಾರ ಶುದ್ಧ ಸೋಂಬೇರಿತನದಿಂದ ಅಪ್ಡೇಟ್ ಮಾಡಲಿಲ್ಲ ಬಿಟ್ಟರೆ ಇನ್ನೇನು ಕಾರಣಗಳಿರಲಿಲ್ಲ.

ಇದು ಚಿತ್ರ ವಿಚಿತ್ರದ ೯೮ನೇ ಪೋಸ್ಟು. ನಾವು ಮೂರು ವಾರಗಳೂ ಅಪ್ಡೇಟ್ ಮಾಡಿದ್ದರೆ ಇದು ನೂರನೇ ಪೋಸ್ಟ್ ಆಗಿರುತ್ತಿತ್ತು. Slow and steady ಆಗಿ ಮುಂದುವರೆಯೋಣ ಅಂತ ನಿಧಾನಕ್ಕೆ ಮುಂದುವರೆಯುತ್ತಿದ್ದೇವೆ :)

ಹೊಸ ವರ್ಷದ ಸಂಕಲ್ಪವನ್ನು ಈ ಸರ್ತಿಯಾದರೂ ಪಾಲಿಸಬೇಕು ಅಂತ ನಾನು ಸಂಕಲ್ಪ ಮಾಡಿದ್ದೇವೆ ಮತ್ತು ಈ ಸಂಕಲ್ಪದ ಪಾಲನೆಗೆ ನಿಮ್ಮೆಲ್ಲರ ಸಹಾಯವನ್ನು ಕೋರುತ್ತಿದ್ದೇವೆ. ಈ ಸರ್ತಿಯ ಸಂಕಲ್ಪ ಏನಪ್ಪಾ ಅಂದರೆ ಈ ವರ್ಷ ಪೂರ್ತಿ ಫಲಕೋತ್ಸವದ ಅತಿ ದೊಡ್ಡ ಸೀಸನ್ ಅನ್ನು ನಡೆಸುವ ಯೋಚನೆ ಮಾಡಿದ್ದೇವೆ. ಈ ಬಾರಿ ಕಳೆದೆರಡು ಸೀಸನ್ ಗಳಿಗಿಂತ ಅತ್ಯಂತ ಹಾಸ್ಯಮಯವಾಗಿರುವ ಫಲಕಗಳನ್ನು ನಿಮ್ಮ ಮುಂದೆ ಇಡುವ ಪ್ರಯತ್ನ ಮಾಡುತ್ತೇವೆ. ಒಂದು ವರ್ಷಕ್ಕೆ ಐವತ್ತೆರಡು ವಾರಗಳಿವೆಯಾದ್ದರಿಂದ ನಮಗೆ ಐವತ್ತೆರಡು ಫಲಕಗಳ ಅವಶ್ಯಕತೆ ಇದೆ. ಈಗಾಗಲೇ ಒಂದಿಷ್ಟು ಸರಕಿದೆ, ಮತ್ತಷ್ಟು ಬೇಕಿವೆ. ನೀವು ಹಾಸ್ಯಮಯ ಫಲಕಗಳನ್ನು ಕಂಡರೆ ನಮಗೆ ದಯಮಾಡಿ ಕಳುಹಿಸಿ ಕೊಡಿ. ಇದು ಫಲಕಗಳ ಕಟ್ಟ ಕಡೆಯ ಮತ್ತು ಅತಿ ದೊಡ್ಡ ಸೀಸನ್ ಆಗಲಿದೆ.ಮುಂದಿನ ವಾರದಿಂದ ಫಲಕೋತ್ಸವ ಸೀಸನ್ ೩ ಪ್ರಾರಂಭವಾಗಲಿದೆ. ಇದರ ಯಶಸ್ಸು ನಿಮ್ಮ ಕೈಲಿದೆ.

Tuesday, December 8, 2009

CAPTCHAA

CAPTCHAA ಯಾರಿಗೆ ಗೊತ್ತಿಲ್ಲ ? ಆದರೂ ಇದರ ಬಗ್ಗೆ ಮಾಹಿತಿ ಕೊಡೋಣ ಅನ್ನಿಸಿತು. ಅದಕ್ಕೇ ಈ ಪೋಸ್ಟು. Disclaimer-ಈ ಬಾರಿ ಪೋಸ್ಟಿನಲ್ಲಿ ವಿಚಿತ್ರವೇನು ಇಲ್ಲ.

ಈ CAPTCHAA ಗಳು ಮೊದಲು ರೂಪುಗೊಂಡದ್ದು challenge-response ಪರೀಕ್ಷೆಯಾಗಿ.ಸವಾಲಿಗೆ ಕಂಪ್ಯೂಟರ್ ಉತ್ತರಿಸದೇ ಮನುಷ್ಯನೊಬ್ಬನು/ಳು ಉತ್ತರಿಸುತ್ತಿದ್ದಾನೆ/ಳೆ ಎಂದು ಖಾತ್ರಿ ಪಡಿಸಿಕೊಳ್ಳಲು ಇದನ್ನು ಬಳಸಿಕೊಳ್ಳಲು ಪ್ರಾರಂಭವಾಯ್ತು. ಕ್ಯಾಪ್ಚಾ ಗಳನ್ನು ಅಭಿವೃದ್ಧಿಪಡಿಸುವಲ್ಲಿ ಬೆಂಗಳೂರಿನ ಐಟಿ ಹುಡುಗ ಕೃಷ್ಣ ಭರತ್ ಅವರೂ ಒಬ್ಬರು. ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ. ಸ್ಪ್ಯಾಮ್ ತಡೆಗಟ್ಟುವಲ್ಲಿ, ಮತಚಲಾಯಿಸುವಿಕೆಯಲ್ಲಿ ಆಗುವ ಅವಾಂತರಗಳನ್ನು ತಪ್ಪಿಸಲು ಇದನ್ನು ಬಳಸಿಕೊಳ್ಳಲಾಯ್ತು.
ಮೂಲತಃ CAPTCHAA ಅಂದರೆ - "Completely Automated Public Turing test to tell Computers and Humans Apart."ಅಂತ.

ಮೊದಲು ವಿವಿಧರೀತಿಗಳಲ್ಲಿ, ವಿಚಿತ್ರ ಆಕೃತಿಗಳಲ್ಲಿ ಅಕ್ಷರಗಳು ಮತ್ತು ಸಂಖ್ಯೆಗಳು ನಮ್ಮ ಮುಂದೆ ಬರುತ್ತಿದ್ದವು. ಆಮೇಲೆ ಐದಕ್ಷರ ಆರಕ್ಷರದ ಪದಗಳು ಬರಲು ಶುರುವಾದವು.ಅದರಲ್ಲಿ ಮೊದಲು ಅರ್ಥ ತಾತ್ಪರ್ಯ ಸಂಬಂಧವಿಲ್ಲದ ಪದಗಳು ಬರುತ್ತಿದ್ದವು. ಆದರೆ ಇತ್ತೀಚೆಗೆ ಬರುತ್ತಿರುವ ಪದಗಳ ಕೆಲವು ಸ್ಯಾಂಪಲ್ ಗಳು ನಿಮ್ಮ ಮುಂದೆ. ಒಂದು ಕನ್ನಡದ ಪದವನ್ನು, ಮತ್ತೊಂದು ಆಂಗ್ಲಪದವನ್ನು ನೋಡಿ ಖುಷಿ ಪಡಿ.






ಮಜಾ ಇರತ್ತೆ ಅಲ್ವಾ ಇಂಥಾ ಪದಗಳನ್ನ ಟೈಪ್ ಮಾಡಕ್ಕೆ ?

ಫೋಟೋ ಕೃಪೆ - ಜಯಶಂಕರ್ ಎ.ಎನ್.
ಮಾಹಿತಿ-ವಿಕಿಪಿಡಿಯಾ

Tuesday, December 1, 2009

ಕೋತಿರಾಮ

ಈ ಬಾರಿ ಒಬ್ಬ ವಿಶೇಷ ವ್ಯಕ್ತಿಯನ್ನು ಪರಿಚಯ ಮಾಡಿಕೊಡುವ ಭಾಗ್ಯ ಚಿತ್ರವಿಚಿತ್ರ ತಂಡಕ್ಕೆ ಪಾಲಚಂದ್ರ ರವರ ದೆಸೆಯಿಂದ ಲಭಿಸಿದೆ. ಅವರೇ ಈ ವ್ಯಕ್ತಿಯ ಫೋಟೋಗಳನ್ನು ಕಳುಹಿಸಿಕೊಟ್ಟಿದ್ದು. ವಿವರಗಳನ್ನು ಕೂಡಾ ಅವರೇ ಕಳಿಸಿದ್ದು.ಅವರು ನೀಡಿರುವ ವಿವರ ಇಂತಿದೆ:

" "ಕೋತಿ ರಾಮ" ಎಂದೇ ಖ್ಯಾತರಾದ ತಮಿಳುನಾಡಿನ ಮೂಲದವರಾದ ಜ್ಯೋತಿರಾಜ್, ದುರ್ಗದ ಕೋಟೆಯ ಗೋಡೆಯನ್ನು ಉಡದಂತೆ ಯಾವುದರ ಸಹಾಯವೂ ಇಲ್ಲದೇ ಲೀಲಾಜಾಲವಾಗಿ ಏರ ಬಲ್ಲರು. ಬರೀ ಏರುವುದಷ್ಟೇ ಅಲ್ಲದೆ ಗೋಡೆ ಹತ್ತುತ್ತಾ ಲಾಗ ಕೂಡ ಹಾಕಬಲ್ಲರು. ರಾಕ್ ಕ್ಲೈಂಬಿಂಗಿನಲ್ಲಿ ಪ್ರಪಂಚದಲ್ಲಿ ಮೂರನೇ ಸ್ಥಾನ ಎಂದು ಅವರನ್ನು ಮಾತನಾಡಿಸಿದಾಗ ತಿಳಿದು ಬಂದ ಸಂಗತಿ."









Tuesday, November 24, 2009

ಕೋತಿಚೇಷ್ಟೆ

ನಾವು ಪ್ರಾಣಿ ಚೇಷ್ಟೆ ಸೀರೀಸ್ ಮುಗಿಸಿದ ದಿನ ಸನ್ಮಾನ್ಯ ಮೌನಗಾಳದ ಸುಶ್ರುತ ರವರು ನಮಗೆ ಕಳಿಸಿಕೊಟ್ಟ ಚಿತ್ರಗಳಿವು. ನಾವು ಸೀರೀಸ್ ನಡೆಸುವಾಗ ಕೆಲವು ಕಮೆಂಟುಗಳಲ್ಲಿ ಪ್ರಾಣಿಗಳ ಪ್ಲಾಸ್ಟಿಕ್ ಸೇವನೆ ಬಗ್ಗೆ ವಿಷಾದ, ಅಸಮಾಧಾನಗಳು ವ್ಯಕ್ತವಾಗಿದ್ದವು. ಅದನ್ನು ನಾವೂ ಅನುಮೋದಿಸುತ್ತೇವೆ. ನಂದಿಬೆಟ್ಟದಲ್ಲಿ ಕೋತಿಗಳ ಕಾಟವು ಹೆಚ್ಚೆಂದು ಕೇಳ್ಪಟ್ಟವರು ಈಗ ಅದನ್ನು ಈ ಚಿತ್ರಗಳಲ್ಲಿ ನೋಡಬಹುದು. ಕೋತಿಗಳು ಹೀಗೆ ಉಗ್ರನರಸಿಂಹಗಳಾಗಲು ಕಾರಣವೇನೆಂದು ನಮ್ಮ ಸಹಬ್ಲಾಗಿಗರಾದ ಪರಿಸರಪ್ರೇಮಿ ಅರುಣ್ ಅವರು ಈ ಲೇಖನದಲ್ಲಿ ವಿವರಿಸುತ್ತಾರೆ. ನಾವೇ ಪ್ರಾಣಿಗಳಿಗೆ ಆಹಾರ ತಿನ್ನಿಸಿ ಅಭ್ಯಾಸ ಮಾಡಿದುದರ ಪರಮಾವಧಿ ಇದೇನೋ ! ಈ ಚಿತ್ರವು ವಿಶೇಷ, ವಿಚಿತ್ರ, ಇವ್ಯಾವ ಹಣೆಪಟ್ಟಿಗೂ ಒಳಪಡದೇ, ನೇರವಾಗಿ ವಿಷಾದದ ಕೆಟೆಗರಿಗೆ ಸೇರತ್ತೆ.





Tuesday, November 17, 2009

ವಿಚಿತ್ರ ವಿಶೇಷ ಪ್ರಾಣಿ ಚೇಷ್ಟೆಗಳು- ೧೫


:)

ಫೋಟೋ ಕೃಪೆ : ಕಾರ್ತಿಕ್. ಸಿ. ಸುನಿಲ್

ಇದರೊಂದಿಗೆ, ವಿಚಿತ್ರ ವಿಶೇಷ ಪ್ರಾಣಿ ಚೇಷ್ಟೆಗಳು ಸರಣಿಯನ್ನು ಮುಗಿಸುತ್ತಿದ್ದೇವೆ.

Tuesday, November 10, 2009

ವಿಚಿತ್ರ ವಿಶೇಷ ಪ್ರಾಣಿ ಚೇಷ್ಟೆಗಳು-೧೪


ಇದನ್ನ ನೋಡಿದರೆ ನನಗೆ ನೆನಪಾಗೋ ಹಾಡು - ಕೊಯಿ ಹಂ ದಂ ನ ರಹಾ...ಕೊಯಿ ಸಹಾರಾ ನಾ ರಹಾ...

ಫೋಟೋ- ಕಾರ್ತಿಕ್ ಸಿ ಸುನಿಲ್

Tuesday, November 3, 2009

ವಿಚಿತ್ರ ವಿಶೇಷ ಪ್ರಾಣಿ ಚೇಷ್ಟೆಗಳು-೧೩

ಹಸಿವಾಗ್ತಿದ್ಯಾ ? ನಿಮಗೂ ಬೇಕಾ ?

ಫೋಟೋ: ಕಾರ್ತಿಕ್ ಸಿ. ಸುನಿಲ್