Tuesday, March 3, 2009

ಫಲಕೋತ್ಸವ ಸೀಸನ್ ಎರಡು - ೧೮



ಈ ಫೋಟೋವನ್ನು ಕಳಿಸಿದವರು ಸಹ ಬ್ಲಾಗಿಗ ಶ್ರೀನಿವಾಸ ರಾಜನ್(ಗಂಡಭೇರುಂಡ) . ಹೋಟೆಲ್ ಒಂದರಲ್ಲಿ ದೊಡ್ಡ ಕನ್ನಡಿಯನ್ನಿಟ್ಟು" " ಇಲ್ಲಿ ತಲೆ ಬಾಚಿಕೊಳ್ಳುವ ಹಾಗಿಲ್ಲ"ಅಂತ ಹಾಕಿದರೆ ಕನ್ನಡಿ ಇರೋದು ಯಾಕೆ ? " ಅಂತ ಅವರ ಪ್ರಶ್ನೆ. ಮತ್ತು ಅವರಿಗೆ ಆಂಗ್ಲದಲ್ಲಿ ಬರೆಯುವುದು ಹೇಗೆಂದು ಗೊತ್ತಾಗದೆ ಸಿಕ್ಕಾಪಟ್ಟೆ ಕನ್ ಫ್ಯೂಸ್ ಆಗಿರೋದನ್ನ ನೀವು ಆ ಫಲಕದಲ್ಲೇ ನೋಡಬಹುದು.

5 comments:

Ittigecement said...

ಇದು ಬಾಂಡ್ಲಿ ತಲೆಯವರಿಗೆ ಅಂತಾ ...

ಗೊತ್ತಾಗಲಿಲ್ವರಾ..?

PaLa said...

ದೊಡ್ಡ ಕನ್ನಡಿ, ಬಾಯಿ ಸರಿಯಾಗಿ ತೊಳ್ದಿದೀರಾ ಅಂತ ನೋಡ್ಕೊಳ್ಳೋಕೆ. ತಲೆ ಬಾಚ್ಕೊಂಡ್ರೆ ಕೂದಲೆಲ್ಲಾ ಉದುರಲ್ವ, ಅದೂ ಹೋಟೆಲಂತಹ ತಿನ್ನೋ ಜಾಗದಲ್ಲಿ!

ಅಂತರ್ವಾಣಿ said...

ನೀನು ಹೋಗಿ ಆಂಗ್ಲ ಭಾಷೆ ಹೇಳಿಕೊಡಮ್ಮ.. :)

Anonymous said...

I want a combii to combii my hair.... hhahhaa

g.mruthyunjaya said...

ಅದು ಬಹುಶಃ ಹೋಟೆಲ್ ಇರಬೇಕು. ಅಲ್ಲಿ ಕೂದಲು ಬಾಚುವುದರಿಂದ ಕೂದಲು ಹಾರಿ ಹೋಗಿ ಕಾಫ಼ಿಗೋ ತಿಂಡಿಗೋ ಬಿದ್ದೀತೆಂದು ಹಾಗೆ ಹಾಕಿರುತ್ತಾರೆ. ಉದ್ದೇಶ ಒಳ್ಳೆಯದಿರಿವುದರಿಂದ ತಪ್ಪು ಬರವಣಿಗೆಯನ್ನು ಕ್ಷಮಿಸಬಹುದು!