ತಮಿಳುನಾಡಿನ ಎರಡು ಪ್ರಸಿದ್ಧ ದೇವಸ್ಥಾನಗಳಲ್ಲಿ ಕಂಡ ಅಮೋಘ ಫಲಕಗಳಿವು. "ದೇವರೇ...ನಮಗೆ ಚೆನ್ನಾಗಿ ದುಡ್ಡು ಬರುವ ಹಾಗೆ ಮಾಡಪ್ಪಾ " ಅಂತ ನಾವು ಕೇಳಿಕೊಳ್ಳೋ ಅವಶ್ಯಕತೆಯೇ ಇಲ್ಲ..."Way to Rs. 100" ಅಂತ ಹಾಕ್ಬಿಟ್ಟಿದ್ದಾರೆ. ಹೋಗೋದು, ನೂರು ರುಪಾಯಿ ತಗೊಳ್ಳೋದು, ಬರೋದು ! ಹೆಂಗೆ ?
ನಾನು ಹೀಗೇ ಅಂದುಕೊಂಡು ಹೋದೆ...ನೋಡಿದ್ರೆ ಅವ್ರು ನನ್ನ ಕೈಯಿಂದಲೇ ನೂರು ರುಪಾಯಿ ತಗೊಂಡ್ರು !!
ಇನ್ನೊಂದು ಅದ್ವಿತೀಯ ಫಲಕ ಕೆಳಗಿದೆ. ಇದರ ವಿವರಣೆಯ ಅವಶ್ಯಕತೆ ಇಲ್ಲ ಅನ್ಸತ್ತೆ :)
ಫಲಕೋತ್ಸವ ಮೊದಲನೆಯ ಸೀಸನ್ ಮುಗಿಸಿ ಈಗ ಎರಡನೆಯ ಸೀಸನ್ ನಲ್ಲಿ ಇಪ್ಪತ್ತೈದು ಕಂತುಗಳನ್ನು ಮುಗಿಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಇಪ್ಪತ್ತಕ್ಕೆ ನಿಲ್ಲಿಸೋಣ ಅಂತಿದ್ವಿ, ಎಲ್ಲರು ಅಪಾರ ಸಂಖ್ಯೆಯಲ್ಲಿ ಚಿತ್ರಗಳನ್ನು ಕಳಿಸುತ್ತಿದ್ದಾರೆ ಆದ್ದರಿಂದ ಫಲಕೋತ್ಸವವನ್ನು ಇನ್ನು ಮುಂದುವರೆಸಲಿದ್ದೀವಿ.
ಈಗ, ಮಂಗಳವಾರದ ಬದಲು ಶುಕ್ರವಾರ ಹೊಸ ಪೋಸ್ಟ್ ಯಾಕೆ ಬಂತು ಅಂತ ನೀವೆಲ್ಲ ಹುಬ್ಬೇರಿಸಬೇಡಿ. ಅದಕ್ಕೆ ಕಾರಣ ಇದೆ.
ಪ್ರತಿ ಸಲ ಬರಿ ಫೋಟೋ ನೋಡುತ್ತಿದ್ದಿರಿ. ಈ ಬಾರಿ ಒಂದು ಕಥೆ ಓದಿ. ಶ್ರೀ ಶ್ರೀನಿವಾಸ ಹುದ್ದರ್ ಅವರು ನಮ್ಮ ಬ್ಲಾಗಿಗೆ ಬಂದು ಫಲಕೋತ್ಸವವನ್ನ ನೋಡಿ ತಮ್ಮ ನೆನಪೊಂದನ್ನು ಹಂಚಿಕೊಂಡಿದ್ದಾರೆ. ಅದನ್ನು ನಿಮ್ಮ ಮುಂದೆ ಪ್ರಸ್ತುತಪಡಿಸಲಿಚ್ಛಿಸುತ್ತೇನೆ. Over to his mail.
ಫಲಕ ಅಂದ್ರೆ ನೆನಪಾಗುವ ಶಂಕ್ರಯ್ಯ..... ಶಂಕ್ರಯ್ಯ ಅಂತ ಒಬ್ಬ ಪಿವುನ್ ಇದ್ದ.ಅವನಿಗೆ ಫಲಕ ಬರಿಯೋಕು ಬರ್ತಿತ್ತು.ಇಂಜಿನಿಯರ್ ಒಬ್ಬರು ಅವನಿಗೆ ಮೈಲಿ ಕಲ್ಲಿನ ಮೇಲೆ "ಮರಿಯಮ್ಮನಹಳ್ಳಿ" ೩ ಕಿ.ಮೀ.ಅಂತ ಬರೆಯಲು ಹೇಳಿ ಕಳಿಸಿದ್ದರು. ಅವ್ನು ಚಿಕ್ಕ ಕಲ್ಲಿನ ಮೇಲೆ ಹೇಗೆ ಬರಿಯುವುದು ಅಂತ ಚಿಂತಿಸುತ್ತಿರುವಾಗಲೇ ನಮ್ಮ ಸಾಹೇಬರು ಜೀಪನಲ್ಲಿ ಬಂದಿಳಿದರು.ಶಂಕ್ರಯ್ಯ ಸಾಹೇಬರ, "ಮರಿಯಮ್ಮನಹಳ್ಳಿ" ಕಲ್ಲಿನ ಮೇಲೆ ಸಾಲಂಗಿಲ್ಲ "ಕೂಡ್ಲಿಗಿ" ಅಂತ ಬರೆಯಲೇ ಎಂದು ಕೇಳಿದ ಯಾಕೋ ಸಿಟ್ಟಿನಲ್ಲಿದ್ದ ಸಾಹೇಬರು "ದಿಲ್ಲಿ" ಅಂತ ಬರಿ ಹೇಳಿ ಜೀಪ ಹತ್ತಿಬಿಟ್ಟರು. ಈ ಶಂಕ್ರಯ್ಯ ಅದನ್ನೆ ಬರೆದು ಬಿಟ್ಟ. "ದಿಲ್ಲಿ" ೩ ಕಿ.ಮೀ. ಮುಂದೆ ಯಾವಾಗಲೋ ಅದನ್ನ ಬದಲಾಯಿಸಲಾಯಿತು. ಶ್ರೀನಿವಾಸ.ಹುದ್ದಾರ. ಧಾರವಾಡ.
ಈ ಸರ್ತಿಯೂ ಎರಡು ಫೋಟೋಗಳು. ಈ ಫೋಟೋ ಕಳಿಸಿಕೊಟ್ಟವರು ಶ್ರೀಹರ್ಷ ಸಾಲಿಮಠ್ ಅವರು. ಅವರ ವಿವರಣೆ ಇಂತಿದೆ.
" ನಮ್ಮಲ್ಲಿನ ಭಾಷಾ ದಾರಿದ್ರ್ಯಕ್ಕೆ ಉದಾಹರಣೆ ಇದು.
ಬಾಬುಸಿಂಗರ ಪೇಡೆ ವಿಶ್ವದಲ್ಲೇ ಉತ್ತಮ ಎಂಬುದಕ್ಕೆ ಅನುಮಾನವಿಲ್ಲ.
ಇಂಗ್ಲಿಶ್ ನ ಅಪಾಸ್ತ್ರುಪಿಯನ್ನು ಕನ್ನಡಕ್ಕೆ ನೇರವಾಗಿ ವರ್ಗಾಯಿಸಿದ್ದಾರೆ. "
ಮತ್ತೊಂದು ಭಾಷಾ ಅವಾಂತರವನ್ನು ಕಾರ್ತಿಕ್ ಸಿ ಸುನಿಲ್ ಅವರು ಕಳಿಸಿಕೊಟ್ಟಿದ್ದಾರೆ. ಅವರ ವಿವರಣೆ ಇಂತಿದೆ: "Idu nodri, vidhyanagara ante.. Govt board galallooo tappaadre en maadona ?"