ತಮಿಳುನಾಡಿನ ಎರಡು ಪ್ರಸಿದ್ಧ ದೇವಸ್ಥಾನಗಳಲ್ಲಿ ಕಂಡ ಅಮೋಘ ಫಲಕಗಳಿವು. "ದೇವರೇ...ನಮಗೆ ಚೆನ್ನಾಗಿ ದುಡ್ಡು ಬರುವ ಹಾಗೆ ಮಾಡಪ್ಪಾ " ಅಂತ ನಾವು ಕೇಳಿಕೊಳ್ಳೋ ಅವಶ್ಯಕತೆಯೇ ಇಲ್ಲ..."Way to Rs. 100" ಅಂತ ಹಾಕ್ಬಿಟ್ಟಿದ್ದಾರೆ. ಹೋಗೋದು, ನೂರು ರುಪಾಯಿ ತಗೊಳ್ಳೋದು, ಬರೋದು ! ಹೆಂಗೆ ?

ನಾನು ಹೀಗೇ ಅಂದುಕೊಂಡು ಹೋದೆ...ನೋಡಿದ್ರೆ ಅವ್ರು ನನ್ನ ಕೈಯಿಂದಲೇ ನೂರು ರುಪಾಯಿ ತಗೊಂಡ್ರು !!
ಇನ್ನೊಂದು ಅದ್ವಿತೀಯ ಫಲಕ ಕೆಳಗಿದೆ. ಇದರ ವಿವರಣೆಯ ಅವಶ್ಯಕತೆ ಇಲ್ಲ ಅನ್ಸತ್ತೆ :)

ಫೋಟೋಗಳು: ಲಕ್ಷ್ಮೀ
6 comments:
ಲಕ್ಷ್ಮಿಯವರೇ,
ತುಂಬಾ ಚೆನ್ನಾಗಿ ಸೆರೆ ಹಿಡಿದಿದ್ದಿರಾ, ಇಂಥಹ ಅದೆಷ್ಟೋ ತಪ್ಪುಗಳು ನಮ್ಮ ನಡುವೆಯೇ ನಡೆಯುತ್ತಿರುತ್ತವೆ,
ha ha ha...
slipper hogi sleeper aytaa ?
ಲಕ್ಷ್ಮಿಯವರೆ,
ಫಲಕೋತ್ಸವ ಮಾಲಿಕೆಯಲ್ಲಿ ಫಲಕಗಳಲ್ಲಿನ ಬರಹಗಳು ಒಂದು ರೀತಿಯಲ್ಲಿ ಮನರಂಜನೆ ಒದಗಿಸುತ್ತವೆ. ತಪ್ಪು ಮಾಡುವುದು ಸಹಜ. ಅದರಲ್ಲಿಯೂ ಒಂದು ಭಾಷೆಯಿಂದ ಮತ್ತೊಂದಕ್ಕೆ ಅನುವಾದಿಸುವಾಗ ಇಂತಹ ಅಚಾತುರ್ಯಗಳು ಆಗುವುದು ಸಹಜ. ಚಿತ್ರಗಳು ಚಿತ್ತಕ್ಕೆ ಚಿಂತನೆಯನ್ನು ನೀಡುತ್ತಿವೆ. ಚಿತ್ರಗಳನ್ನು ಚೆನ್ನಾಗಿ ಸೆರೆಹಿಡಿದು ಪ್ರಕಟಿಸುತ್ತಿದ್ದೀರಿ.
ಧನ್ಯವಾದಗಳು.
ನಮಸ್ತೆ,
ನಮ್ಮ ಆಫೀಸಿನಲ್ಲಿ ತಮಿಳು ಸಹೋದ್ಯೋಗಿಯೊಬ್ಬಳು ಇದ್ದಾಳೆ, ಆಕೆಯನ್ನು ಸುಮ್ಮನೇ ಕಾಡಿಸುತ್ತಿರುತ್ತೇವೆ. ಇದನ್ನು ತೋರಿಸಿದಾಗ ಇಂಗ್ಲೀಷಿನ ಇಂತಹ ತಪ್ಪುಗಳಿಗೆ ಚೈನಾಕ್ಕೆ ಹೋಗುವುದು ಬೇಡ, ಅಂತ ಮಲೆಯಾಳಿ ಸಹೋದ್ಯೋಗಿ ಹೇಳಿದ.
ಎಲ್ಲ ಚಿತ್ರಗಳನ್ನೂ ನೋಡಿದೆ. ಮಜಾ ಇವೆ.. ಮುಂದುವರೆಸಿ.
ತುಂಬಾ ನಗು ತರಿಸಿದವು
ಸಕತ್ ಮಜಾ ಇದೆ ನಿಮ್ಮ ಈ ಬ್ಲಾಗ್....
Guru
Post a Comment