Sunday, March 1, 2009

ಚಿತ್ರ ವಿಚಿತ್ರಕ್ಕೆ ಒಂದು ವರ್ಷ

ನನ್ನ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದ ವಿಚಿತ್ರ ಚಿತ್ರಗಳನ್ನು ಹಾಕಲಿಕ್ಕೆಂದು ಶುರು ಮಾಡಿದ ಈ ಪುಟ್ಟ ಫೋಟೋಬ್ಲಾಗು ಇಂದು ನಿಮ್ಮೆಲ್ಲರ ಪ್ರೋತ್ಸಾಹ, ಕೊಡುಗೆ ಮತ್ತು ಭಾಗವಹಿಸುವಿಕೆಯಿಂದ ಇಂದಿಗೆ ಒಂದು ವರ್ಷ ಪೂರೈಸಿದೆ. ಪರಿಸರಪ್ರೇಮಿ ಅರುಣರ ಕೊಡುಗೆ, ಸಲಹೆ ಮತ್ತು ಮಾರ್ಗದರ್ಶನದಲ್ಲಿ,ಶ್ರೀಕಾಂತ್ ಹಾಗೂ ಶ್ರೀನಿವಾಸ್ ಅವರ ಚಿತ್ರಕೊಡುಗೆಗಳಿಂದ ಶುರುವಾದ ಈ ಬ್ಲಾಗು ಆನಂತರದಲ್ಲಿ ಓದುಗ ಬಾಂಧವರಿಂದ ಕೊಡುಗೆಗಳನ್ನು ಸ್ವೀಕರಿಸುವ ಮಟ್ಟಕ್ಕೆ ಈಗ ಬೆಳೆದು ನಿಂತಿದೆ. ಫಲಕೋತ್ಸವ ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಯಶಸ್ಸನ್ನು ಕಂಡು ಈಗ ಎರಡನೆಯ ಸೀಸನ್ ನಡೆಯುತ್ತಿದೆ. ಈ ಸಂದರ್ಭದಲ್ಲಿ ನಾನು ಬ್ಲಾಗ್ ಯಶಸ್ವಿಯಾಗಲು ಸಹಕರಿಸಿ ಪ್ರೋತ್ಸಾಹಿಸಿದ ನಿಮ್ಮೆಲ್ಲರಿಗೂ ಕೃತಜ್ಞಳಾಗಿದ್ದೇನೆ.

ನಾವು ಫೋಟೋ ತೆಗೆಯಲು ಕ್ಯಾಮೆರಾ ಇರಲೇಬೇಕಲ್ಲವೇ ? ಮೊಬೈಲೋ, ಡಿಜಿಕ್ಯಾಮೋ, ಎಸ್ ಎಲ್ ಆರ್ , ಯಾವುದಿರಲಿ, ನಾನು ಅದಕ್ಕೂ ಕೃತಜ್ಞಳು.ಈ ಸಂದರ್ಭದಲ್ಲಿ ಕ್ಯಾಮೆರಾ ಬೆಳೆದು ಬಂದ ದಾರಿಯ ಒಂದು ಪುಟ್ಟ ಪರಿಚಯ ಮಾಡಿಕೊಳ್ಳುವುದು ಸೂಕ್ತ ಎನಿಸುತ್ತದೆ.

ಕ್ಯಾಮೆರಾದ ಮೊದಲ ರೂಪ ಕ್ಯಾಮೆರಾ ಒಬ್ಸ್ ಕ್ಯೂರಾ (camera obscura). ಇದನ್ನು ಕಂಡುಹಿಡಿದವರು ಇರಾನಿಯನ್ ವಿಜ್ಞಾನಿ Ibn al-Haytham (Alhazen).





ಅಂದಿನಿಂದ ೧೯೯೦ವರೆಗೆ ಆದ ಬೆಳವಣಿಗೆಯನ್ನು ಈ ಲಿಂಕಿನಲ್ಲಿ ಕಾಣಬಹುದು.


ಡಿಜಿಟಲ್ ಫೋಟೋಗ್ರಫಿಯ ಬಗ್ಗೆ ಹೆಚ್ಚು ಜನಕ್ಕೆ ಗೊತ್ತಿದೆ.ಆದ್ದರಿಂದ ಅದನ್ನು ವಿವರಿಸುವ ಅವಶ್ಯಕತೆಯಿಲ್ಲ ಎಂದುಕೊಳ್ಳುತ್ತೇನೆ.

ಈ ಬ್ಲಾಗಿನ ಉಗಮಕ್ಕೆ ಕಾರಣವಾದ ನನ್ನ ಮೊಬೈಲ್ ಫೋನ್ ಮತ್ತು ನಮ್ಮ ತಂಡದ ಮೊಬೈಲ್ ಫೋನ್ ಗಳು ಹಾಗೂ ಕ್ಯಾಮೆರಾಗಳಿಗೆ, ಮತ್ತು ನಿಮ್ಮೆಲ್ಲರ ಕ್ಯಾಮೆರಾಗಳಿಗೂ ಒಂದೊಂದು ಥ್ಯಾಂಕ್ಸ್ !

ಫೋಟೋ ಕೃಪೆ: ವಿಕಿಪೀಡಿಯಾ.

7 comments:

PaLa said...

ಸೂಪರ್, ಒಂದು ವರ್ಷದ ಕೂಸಾದ ನಿಮ್ಮ "ಚಿತ್ರ ವಿಚಿತ್ರ" ಬೆಳೆದು ಪ್ರೌಢನಾಗಲಿ (ಪ್ರೌಢೆಯಾಗಲಿ). ಹೆಚ್ಚು ಹೆಚ್ಚು ಚಿತ್ರ ವಿಚಿತ್ರಗಳು ನಿಮ್ಮ ಬ್ಲಾಗಿಗೆ ಹರಿದು ಬರಲಿ.. ಕ್ಯಾಮರಾದ ಮೊದಲ ರೂಪದ ಚಿತ್ರಕ್ಕೆ ವಂದನೆಗಳು (ಒಂದು ಚಿಕ್ಕ ಸಲಹೆ: ಚಿತ್ರ ನಿಮ್ಮದಲ್ಲದಿದ್ದಲ್ಲಿ, ಚಿತ್ರವನ್ನಾಯ್ದು ಕೊಂಡ ಮೂಲ ಹೆಸರಿಸುವುದು ಕ್ಷೇಮ)
ಅಭಿನಂದನೆಗಳೊಂದಿಗೆ

--
ಪಾಲ

PaLa said...

ಕೊನೇಲಿತ್ತು ನೋಡಿರ್ಲಿಲ್ಲ, ಈಗ್ ನೋಡಿದೆ, ವಾಪಾಸ್ ತಗೊಂಡೆ ಸೂಚನೇನಾ :)

Ittigecement said...

ಲಕ್ಷ್ಮೀಯವರೆ..

ಅಭಿನಂದನೆಗಳು..

ನಿಮ್ಮ ಈ ಬ್ಲಾಗ್ ಇನ್ನಷ್ಟು ವಿಚಿತ್ರ ಚಿತ್ರಗಳೊಂದಿಗೆ..

ಮತ್ತಷ್ಟು ವೈವಿಧ್ಯಮಯವಾಗಿ ಬರಲಿ..

ಶುಭಾಶಯಗಳು..

ವಿ.ರಾ.ಹೆ. said...

ನಮಗೆಲ್ಲ್ಲಾ ಚಿತ್ರ-ವಿಚಿತ್ರಗಳನ್ನು ಕಾಣಿಸಿದ ಬ್ಲಾಗ್ ಗೆ ಅಭಿನಂದನೆಗಳು, ಧನ್ಯವಾದಗಳು.. :)

ಶಿವಪ್ರಕಾಶ್ said...

"ಚಿತ್ರ-ವಿಚಿತ್ರ"ಕ್ಕೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು

shivu.k said...

ಲಕ್ಷ್ಮಿ ಮೇಡಮ್,

ಆಭಿನಂದನೆಗಳು....

ಚಿತ್ರ-ವಿಚಿತ್ರ ಮತ್ತಷ್ಟು ವಿಚಿತ್ರ ಚಿತ್ರಗಳನ್ನು ಹೊತ್ತು ತರಲಿ...ಹೊರುವ ಶಕ್ತಿ ಗಳಿಸಲಿ....

ಅಂತರ್ವಾಣಿ said...

ವರ್ಷದಿಂದ ವಿಚಿತ್ರವಾದ ಫೋಟೊ ತೋರಿಸುತ್ತೀದ್ದೀಯ... ಒಳ್ಳೇದು.
ಅಭಿನಂದನೆಗಳು

ಮತ್ತಷ್ಟು ವಿ’ಚಿತ್ರ’ ತೋರಿಸಲಿ