Tuesday, March 31, 2009

ಫಲಕೋತ್ಸವ ಸೀಸನ್ ಎರಡು - ೨೨

ಪ್ರತಿ ಸಲ ಒಂದೊಂದೇ ಫೋಟೋ ನೋಡುತ್ತಿದ್ದಿರಿ...ಈ ಬಾರಿ ಎರಡು ವಿಚಿತ್ರ ವಿಶೇಷಗಳನ್ನ ನಿಮ್ಮ ಮುಂದಿಡುತ್ತಿದ್ದೇನೆ. ಮೊದಲ ಚಿತ್ರವನ್ನ ಕಳಿಸಿಕೊಟ್ಟವರು ಗಣೇಶ್ ನಮನ ಅವರು. "Site for sale" ಅಂತ ಸಾರ್ವಜನಿಕ ಸ್ವತ್ತಾದ ಬಸ್ ನಿಲ್ದಾಣದ ಮುಂದೆ ಹಾಕಿದ್ದಾರೆ. ನೋಡಿದವರಿಗೆ ಬಸ್ ಸ್ಟಾಪ್ ಮಾರಾಟಕ್ಕಿದೆ ಅನ್ನುವ ಹಾಗನ್ನಿಸತ್ತೆ ಅಂತ ಗಣೇಶ್ ಅವರಿಗೆ ಅನ್ನಿಸಿ ನಮಗೆ ಫೋಟೋ ಕಳಿಸಿದ್ದಾರೆ.




ಇನ್ನೊಂದು ಅತ್ಯದ್ಭುತ, ಅದ್ವಿತೀಯ ಫೋಟೋ. ದೇಶದ ಪ್ರಮುಖ ಪಕ್ಷ ಒಂದು ತನ್ನ ಕಚೇರಿಯನ್ನು ಇಲ್ಲಿ ಸ್ಥಾಪಿಸಲಾಗಿದೆ ಅಂತ ಫಲಕ ಹಾಕಿದೆ. ನಿಮಗೆ ಕಟ್ಟಡ ಕಾಣತ್ತಾ ? ನೀವು ದುರ್ಬೀನು, ಟೆಲೆಸ್ಕೋಪು, ಮೈಕ್ರೋಸ್ಕೋಪ್ ಇಟ್ಟುಕೊಂಡು ನೋಡಿ ಬೇಕಿದ್ರೆ !
ಈ ಫೋಟೋ ಕಳಿಸಿಕೊಟ್ಟವರು ಶ್ರೀಕಾಂತ್ ಕೆ.ಎಸ್.


4 comments:

shivu.k said...

ಎರಡನೇ ಫೋಟೋ ಸಕ್ಕಾತ್ತಾಗಿದೆ...ಜೊತೆಗೆ ತಲೆಕೆಡಿಸುತ್ತೆ...

PaLa said...

ಸೈಟ್ ಅಂದ್ರೆ ಖಾಲಿ ಜಾಗ ಅಲ್ದ?

ಎರ್ಡ್ನೇ ಚಿತ್ರದಲ್, ಹಿಂದ್ಗಡೆ ಕಾಂಬು ಲೈಟ್ಗಳು ಆ ಕಟ್ಟಡದ್ ಅಲ್ಲಾ ಅಂಬ್ರಾ?

ತೆಂಗಿನ ಮರದ್ ಬ್ಯಾಕ್ ಗ್ರೌಂಡ್ ತೆಗ್ದ್ರೆ ನಿಮ್ ಸೈಟ್ ಇನ್ನೂ ಲಾಯ್ಕ್ ಕಾಣತ್ ಕಾಣಿ

ದೀಪಸ್ಮಿತಾ said...

ನಗು ಬರಿಸುತ್ತವೆ. ನನ್ನ ಬ್ಲಾಗಿನಲ್ಲಿ 'ಮುಕಬಿಂಕ'ದ ಬಗ್ಗೆ ಬರೆದಿದ್ದೇನೆ. ಹಾಗೆಂದರೇನು ಎಂದು ತಿಳಿಯಲು ಇಲ್ಲಿಗೆ http://ini-dani.blogspot.com/2008/06/blog-post_10.html#links ಭೇಟಿ ನೀಡಿ. ಇಂತಹ ತಪ್ಪುಗಳನ್ನು ಓದಲು ಒಂಥರ ಮಜ ಎನಿಸುತ್ತದೆ. ಕೋರಮಂಗಲದ ಒಂದು ಹೋಟೆಲ್, Multi Cushion Restaurant ಅಂತ ಬರೆದಿದ್ದಾರೆ. ಎಷ್ಟು ದಿಂಬು ಕೊಡುತಾರೋ?

Srinivasa Rajan (Aniruddha Bhattaraka) said...

eraDane photo dalli catch-u "building illa" antalla.. hinde ide. aadre idanna hagalu hottalli tegdidre innuu uttamavaagirtittu.
the catch is "congress bhavana" anta bardu ondaksharaanu suLLu maaDde bari congress giDa beLsi silent aagiddare :) idralli kattalirodrinda congress gida highlight aagilla.

secondly, dayaviTTu ee blog na background change maaDidre tumba uttamavagirutte anta nan anisike. photo-dalliro eshTo details na ee background mask maaDtide. the main content is being partially transparent.