Friday, April 24, 2009

ಫಲಕದ ಕಥೆ

ಫಲಕೋತ್ಸವ ಮೊದಲನೆಯ ಸೀಸನ್ ಮುಗಿಸಿ ಈಗ ಎರಡನೆಯ ಸೀಸನ್ ನಲ್ಲಿ ಇಪ್ಪತ್ತೈದು ಕಂತುಗಳನ್ನು ಮುಗಿಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಇಪ್ಪತ್ತಕ್ಕೆ ನಿಲ್ಲಿಸೋಣ ಅಂತಿದ್ವಿ, ಎಲ್ಲರು ಅಪಾರ ಸಂಖ್ಯೆಯಲ್ಲಿ ಚಿತ್ರಗಳನ್ನು ಕಳಿಸುತ್ತಿದ್ದಾರೆ ಆದ್ದರಿಂದ ಫಲಕೋತ್ಸವವನ್ನು ಇನ್ನು ಮುಂದುವರೆಸಲಿದ್ದೀವಿ.

ಈಗ, ಮಂಗಳವಾರದ ಬದಲು ಶುಕ್ರವಾರ ಹೊಸ ಪೋಸ್ಟ್ ಯಾಕೆ ಬಂತು ಅಂತ ನೀವೆಲ್ಲ ಹುಬ್ಬೇರಿಸಬೇಡಿ. ಅದಕ್ಕೆ ಕಾರಣ ಇದೆ.
ಪ್ರತಿ ಸಲ ಬರಿ ಫೋಟೋ ನೋಡುತ್ತಿದ್ದಿರಿ. ಈ ಬಾರಿ ಒಂದು ಕಥೆ ಓದಿ. ಶ್ರೀ ಶ್ರೀನಿವಾಸ ಹುದ್ದರ್ ಅವರು ನಮ್ಮ ಬ್ಲಾಗಿಗೆ ಬಂದು ಫಲಕೋತ್ಸವವನ್ನ ನೋಡಿ ತಮ್ಮ ನೆನಪೊಂದನ್ನು ಹಂಚಿಕೊಂಡಿದ್ದಾರೆ. ಅದನ್ನು ನಿಮ್ಮ ಮುಂದೆ ಪ್ರಸ್ತುತಪಡಿಸಲಿಚ್ಛಿಸುತ್ತೇನೆ. Over to his mail.

ಫಲಕ ಅಂದ್ರೆ ನೆನಪಾಗುವ ಶಂಕ್ರಯ್ಯ.....

ಶಂಕ್ರಯ್ಯ ಅಂತ ಒಬ್ಬ ಪಿವುನ್ ಇದ್ದ.ಅವನಿಗೆ ಫಲಕ ಬರಿಯೋಕು ಬರ್‍ತಿತ್ತು.ಇಂಜಿನಿಯರ್ ಒಬ್ಬರು ಅವನಿಗೆ ಮೈಲಿ ಕಲ್ಲಿನ ಮೇಲೆ "ಮರಿಯಮ್ಮನಹಳ್ಳಿ" ೩ ಕಿ.ಮೀ.ಅಂತ ಬರೆಯಲು ಹೇಳಿ ಕಳಿಸಿದ್ದರು. ಅವ್ನು ಚಿಕ್ಕ ಕಲ್ಲಿನ ಮೇಲೆ ಹೇಗೆ ಬರಿಯುವುದು ಅಂತ ಚಿಂತಿಸುತ್ತಿರುವಾಗಲೇ ನಮ್ಮ ಸಾಹೇಬರು ಜೀಪನಲ್ಲಿ ಬಂದಿಳಿದರು.ಶಂಕ್ರಯ್ಯ ಸಾಹೇಬರ,
"ಮರಿಯಮ್ಮನಹಳ್ಳಿ" ಕಲ್ಲಿನ ಮೇಲೆ ಸಾಲಂಗಿಲ್ಲ "ಕೂಡ್ಲಿಗಿ" ಅಂತ ಬರೆಯಲೇ ಎಂದು ಕೇಳಿದ ಯಾಕೋ ಸಿಟ್ಟಿನಲ್ಲಿದ್ದ ಸಾಹೇಬರು "ದಿಲ್ಲಿ" ಅಂತ ಬರಿ ಹೇಳಿ ಜೀಪ ಹತ್ತಿಬಿಟ್ಟರು. ಈ ಶಂಕ್ರಯ್ಯ ಅದನ್ನೆ ಬರೆದು ಬಿಟ್ಟ.
"ದಿಲ್ಲಿ"
೩ ಕಿ.ಮೀ.
ಮುಂದೆ ಯಾವಾಗಲೋ ಅದನ್ನ ಬದಲಾಯಿಸಲಾಯಿತು.
ಶ್ರೀನಿವಾಸ.ಹುದ್ದಾರ.
ಧಾರವಾಡ.


ನಿಮ್ಮನೆನಪನ್ನು ಹಂಚಿಕೊಂಡದ್ದಕ್ಕೆ ಬಹಳ ಧನ್ಯವಾದಗಳು ಸರ್.

4 comments:

Shankar Prasad ಶಂಕರ ಪ್ರಸಾದ said...

ಇದೇನಪ್ಪಾ "ಫಲಕೊತ್ಸವ ಅಂದ್ರೆ ಶಂಕ್ರಯ್ಯ ನೆನಪಾಗ್ತಾನೆ" ಅನ್ನೋದನ್ನ ನೋಡಿ,
ನನ್ನ ಆಟೋ ಅನಿಮುತ್ತುಗಳನ್ನ ಇಷ್ಟ ಪಟ್ಕೊಂಡು ಹೇಳ್ತಾ ಇದಾರಾ ಅನ್ಕೊಂಡೆ.
ಆಮೇಲೆ ಶಂಕ್ರಯ್ಯ ಯಾರು ಅನ್ನೋದು ಗೊತ್ತಾಯ್ತ.

ಕಟ್ಟೆ ಶಂಕ್ರ

ಶಿವಪ್ರಕಾಶ್ said...

ha ha ha ha

ಮಲ್ಲಿಕಾರ್ಜುನ.ಡಿ.ಜಿ. said...

ದಿಲ್ಲಿಗೆ ಅಷ್ಟು ಸುಲಭವಾಗಿ ಕಳಿಸುತ್ತಾನೆ ಶಂಕ್ರಯ್ಯ ಅಂತ ಗೊತ್ತಾದರೆ ಎಂ.ಪಿ ಎಲೆಕ್ಷನ್ ಗೆ ನಿಂತ ರಾಜಕಾರಣಿಗಳು ಅವನ ಹಿಂದೆ ಬೀಳುತ್ತಿದ್ದರು!

ಅಂತರ್ವಾಣಿ said...

:(

ನಾನು ಕಳಿಸಿದ ಫೋಟೋ ಇದುವರೆಗು ಪೋಸ್ಟ್ ಆಗದೇ ಇರೋದು ತುಂಬಾ ಬೇಸರ ತಂದಿದೆ.
ಒಂದೆರಡು ಫೋಟೋ ಇತ್ತು... ಆದರೆ ಇಲ್ಲಿಗೆ ಕಳಿಸಿಕೊಡುವ ನನ್ನ ಹುಮ್ಮಸ್ಸ ನಿಂತೋಗಿದೆ.
ಇದು ಅನ್ಯಾಯ, ಅಕ್ರಮ.