ಈ ಫೋಟೋಗಳನ್ನು ಕಳಿಸಿಕೊಟ್ಟವರು ಪಾಲಚಂದ್ರ [http://palachandra.blogspot.com]. ಕೆಳಗಿನದ್ದು ಅವರು ನೀಡಿರುವ ವಿವರಣೆ. ಅವರು ನನಗೆ ಎಡಿಟ್ ಮಾಡಲು ಹೇಳಿದ್ದರಾದರೂ, ಇದೇ ಶೈಲಿ ಚೆನ್ನ ಅನ್ನಿಸಿ ಇದ್ದಿದ್ದನ್ನು ಇದ್ದಹಾಗೇ ಇಲ್ಲಿ ನೀಡಿದ್ದೇನೆ.
ಎನ್ಫೀಲ್ಡ್ ಬೈಕನ್ನ ಬದಲಾಯಿಸಿ ರಿಕ್ಷಾ ತರ ಓಡಿಸ್ಕೊಂಡು ಹೋಗೋದು. ಇದು ಗುಜಾರಾತಿನ ಹಳ್ಳಿಗಳಲ್ಲಿ ಫೇಮಸ್ಸು. ಡಿಸಲ್ ಹಾಕಿ ಓಡ್ಸೋ ಇದರಲ್ಲಿ ಸುಮಾರು ೮-೧೦ ಕಿ.ಮೀ. ವರೆಗೂ ಪ್ರಯಾಣಿಸಿದರೂ ೫ ರೂ. ಅಷ್ಟೆ. ಅದೂ ಓಪನ್ ಟಾಪು, ಸಕ್ಕತ್ ಮಜಾ ಬರುತ್ತೆ ಪ್ರಯಾಣ ಮಾಡೋಕೆ. ಬೆಂಗ್ಳೂರ್ ತರ ಪೇಟೆ ರಿಕ್ಷ ಆದ್ರೆ ಬರೀ ಕಪ್ಪು, ಹಳದಿ ಕಲರ್ ಆದ್ರೆ ಅಲ್ಲಿನ ರಿಕ್ಷಾಗಳು ಕಲರ್ ಕಲರ್, ಅದೂ ಒಳ್ಳೋಳ್ಳೆ ಚಿತ್ರ, ಜರಿ ಎಲ್ಲಾ ಸಿಂಗರ್ಸಿರ್ತಾರೆ. ಕಲೆಗೆ ಕಲೆ,Cost cutting ಗೆ cost cutting. ಟಾಪ್ ಇರೋದೂ ಇದೆ..
ಕಳೆದ ವಾರ ಕೇಳಿದ ಪ್ರಶ್ನೆಗೆ ಉತ್ತರಗಳು:
೧. Furniture
೨. ನಾಲ್ಕು ಸ್ಪೆಲ್ಲಿಂಗ್ ಮಿಸ್ಟೇಕುಗಳಿದ್ದವು. ಐದನೆಯದು name of agency. ಅಲ್ಲಿ, ಕಂಪನಿಯ ಹೆಸರು ಹಾಕುವ ಬದಲು ಕಂಪನಿಯ ಮಾಲೀಕನ ಹೆಸರು ಹಾಕಿದ್ದಾರೆ. ಒಟ್ಟು ಐದು ತಪ್ಪುಗಳು.
4 comments:
ಸೂಪರ್ ಆಗಿದೆ....ಮೇಕಪ್ಪು ಕೂಡ...ಚೆನ್ನಾಗಿದೆ..
ಎಂಥ ಐಡಿಯಾ ಅಲ್ವಾ? ಹಾಗೇ ಈ ರೀತಿಯ ವಾಹನಗಳನ್ನು ಹುಡುಕಿ ಬ್ಲಾಗಲ್ಲಿ ಹಾಕುವ ನಿಮ್ಮ ಐಡಿಯಾ ಮೆಚ್ಚುವಂಥದ್ದೇ. ನಾನು ಕೇರಳದಲ್ಲಿ ಈ ರೀತಿ ಲಾರಿಗಳ ಚಿತ್ರ ತೆಗೆದಿರುವೆ. ಮುಂದೆಂದಾದರೂ ಬ್ಲಾಗಲ್ಲಿ ಹಾಕುವೆ.
ಚೆನ್ನಾಗಿದೆ ಚೆನ್ನಾಗಿದೆ!
ಒಳ್ಳೆ ಐಡಿಯಾ :-)
ಈವಕ್ಕೆ ಅಲ್ಲಿ ಚಡ್ಕಾ ಅನ್ನುತ್ತಾರೆ.
Post a Comment