Friday, May 29, 2009

ಫಲಕೋತ್ಸವಕ್ಕೆ ಬಿಡುವು

ಓದುಗ ಬಾಂಧವರಿಗೆ Team ಚಿತ್ರ ವಿಚಿತ್ರ ಮಾಡುವ ನಮಸ್ಕಾರಗಳು.

ಕಳೆದ ವರ್ಷ ಜುಲೈ ತಿಂಗಳಲ್ಲಿ ಆರಂಭವಾದ ಫಲಕೋತ್ಸವ ಈ ಮೇ ತಿಂಗಳಿಗೆ ಎರಡು ಸೀಸನ್ ಗಳನ್ನು ಕಂಡಿದೆ. ನೀವು ಕಳಿಸುತ್ತಿರುವ ಫಲಕಗಳು ನಮ್ಮ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದೆ. ನಾವು ಮೊದಲನೆಯ ಸೀಸನ್ ನಲ್ಲಿ ಹತ್ತು ಫಲಕಗಳನ್ನು ಪ್ರದರ್ಶಿಸಿದ್ದೆವು. ಈ ಸೀಸನ್ ನಲ್ಲಿ ಇಪ್ಪತ್ತಕ್ಕೆ ನಿಲ್ಲಿಸುವ ಉದ್ದೇಶವಿತ್ತಾದರೂ, ಒಂದೊಂದಾಗಿ ನಮಗೆ ತಲುಪುತ್ತಿದ್ದ ಫಲಕಗಳು "ಇದನ್ನು ಹಾಕಿಯೇ ಬಿಡುವ" ಎನ್ನುವಂತೆ ಪ್ರೇರೇಪಿಸುತ್ತಿತ್ತು. ಹಾಗಾಗಿ ನಾವು ಒಂದೇ ಪೋಸ್ಟಿನಲ್ಲಿ ಎರಡು ಮೂರು ಚಿತ್ರಗಳನ್ನು ಹಾಕುವ ಪ್ರಯೋಗವನ್ನು ಮಾಡಿದೆವು. ನೀವು ಅದಕ್ಕೂ ಬೆನ್ನು ತಟ್ಟಿ ಪ್ರೋತ್ಸಾಹಿಸಿದಿರಿ. ನಿಮಗೆಲ್ಲರಿಗೂ ನಮ್ಮ ಧನ್ಯವಾದಗಳು.

ಇಪ್ಪತ್ತಕ್ಕೆ ನಿಲ್ಲಬೇಕಿದ್ದ ನಮ್ಮ ದ್ವಿತೀಯ ಸೀಸನ್ ಈಗ ಮೂವತ್ತು ತಲುಪಿವೆ. ನಾವು ತೆಗೆದಿರುವ ಫೋಟೋಗಳು ಮತ್ತು ನೀವು ಕಳಿಸಿರುವ ಫೋಟೋಗಳು ಇನ್ನೂ ಬಾಕಿ ಇವೆ. ಆದರೆ ಬರೀ ಫಲಕಗಳನ್ನು ಹಾಕತ್ತಿದ್ದರೆ ಅದು ಯಾಂತ್ರಿಕವೆನಿಸಿಬಿಡುತ್ತದೆ. ಕಾಲಾಂತರದಲ್ಲಿ ಬೋರ್ ಆಗಲಿಕ್ಕೂ ಸಾಕು. ಹಾಗಾಗಿ ಫಲಕೋತ್ಸವಕ್ಕೆ ಒಂದೆರಡು ತಿಂಗಳು ಬಿಡುವು ಕೊಟ್ಟು, ಮತ್ತಷ್ಟು ಹಾಸ್ಯಮಯ, ವಿಚಿತ್ರ, ವಿಶೇಷ ಫಲಕಗಳೊಂದಿಗೆ ಮೂರನೆಯ ಸೀಸನ್ ನಲ್ಲಿ ನಿಮ್ಮನ್ನು ರಂಜಿಸಲಿದ್ದೇವೆ. ನೀವು ಫಲಕಗಳನ್ನು ಖಂಡಿತಾ ಕಳಿಸುತ್ತಿರಬಹುದು, ನಾವು ಅದನ್ನು ಫಲಕೋತ್ಸವದ ಮೂರನೆಯ ಸೀಸನ್ ನಲ್ಲಿ ಖಂಡಿತಾ ಪ್ರಕಟಿಸುವೆವು.

ಮುಂದಿನ ಮಂಗಳವಾರದಿಂದ ಹೊಸದೊಂದು ಸೀರೀಸ್ ಪ್ರಾರಂಭವಾಗಲಿದೆ. ನಿಮ್ಮ ಪ್ರೋತ್ಸಾಹದಾಯಕ ಕಮೆಂಟುಗಳ,ಮತ್ತಷ್ಟು ಚಿತ್ರಗಳ ನಿರೀಕ್ಷೆಯಲ್ಲಿದ್ದೇವೆ.

ಧನ್ಯವಾದಗಳೊಂದಿಗೆ,

Team ಚಿತ್ರ ವಿಚಿತ್ರ .

4 comments:

ಅಂತರ್ವಾಣಿ said...

ಹೊಸದು ಕೊಡುತ್ತಿರ ಬೇಕು. ಇಲ್ಲದೆ ಇದ್ದರೆ ಖಂಡಿತಾ ಬೋರ್ ಹೊಡೆಯುತ್ತೆ.
ATB :)
ನಗೋಕೆ ನಾನು ರೆಡಿ
ನೀವು ಫೋಟೋ ಸಿದ್ದ ಮಾಡಿ

ಸಿಮೆಂಟು ಮರಳಿನ ಮಧ್ಯೆ said...

ಹೊಸತನ್ನು ಎದುರು ನೋಡುತ್ತಿರುವೆ...

ಹಳೆಯದು ಬೋರು ಬರಲಿಲ್ಲ....

ವಿಕಾಸ್ ಹೆಗಡೆ said...

yAvdU bore bandilla, adroo hosadara nireexeyalliddene.. :)

agni said...

:) ಸಖತ್....