Tuesday, February 3, 2009

ಫಲಕೋತ್ಸವ ಸೀಸನ್ ಎರಡು-೧೪

ಅಪ್ರತಿಮ ವಾಗ್ಮಿ, ಅಸಾಮಾನ್ಯ ಬರಹಗಾರ, ಅಸತ್ಯವನ್ನು ಅನ್ವೇಷಿಸುವಲ್ಲಿ ಸದಾ ನಿರತರಾಗಿರುವ ಸಹ ಬ್ಲಾಗಿಗ ಅಸತ್ಯ ಅನ್ವೇಷಿಯವರು ಅಸತ್ಯವನ್ನು ಅನ್ವೇಷಣೆ ಮಾಡುವ ಕೆಲಸಕ್ಕೆ ಅನಾಮತ್ತಾಗಿ ರಜೆ ಘೋಷಿಸಿ ನಮ್ಮ ಚಿತ್ರ ವಿಚಿತ್ರ ಬ್ಲಾಗಿನ ಫಲಕೋತ್ಸವಕ್ಕೆ ಚಿತ್ರವನ್ನು ಅನ್ವೇಷಣೆ ಮಾಡಿ ಕಳಿಸಿದ್ದಾರೆ :) ಅದಕ್ಕೆ ನಾವು ’ಅ’ತ್ಯಂತ ’ಅ’ಭಾರಿಗಳಾಗಿದ್ದೇವೆ.

ಇದು ಕಾಂಚಿಪುರದ ಪ್ರಸಿದ್ಧ ದೇವಾಲಯವೊಂದರಲ್ಲಿ ತೆಗೆದ ಚಿತ್ರವಂತೆ. ದೇವಸ್ಥಾನದ ಅಧಿಕಾರಿಯವರು ಕನ್ನಡದಲ್ಲಿ ಏನನ್ನು ಹೇಳಲು ಬಯಸುತ್ತಿದ್ದಾರೆ ಅಂತ ನಾನು ವಿವರಿಸುವ ಅವಶ್ಯಕತೆ ಇಲ್ಲ ಅಂತ ಅನ್ನಿಸುತ್ತೆ.

ಅಂದ ಹಾಗೆ ಇದು ಚಿತ್ರವಿಚಿತ್ರದ ಐವತ್ತನೆಯ ಪೋಸ್ಟು. ನಿಮ್ಮ ಪ್ರೋತ್ಸಾಹ ನೀವೆಲ್ಲರೂ ಕಳಿಸುವ ಫೋಟೋಗಳ ಮೂಲಕ ಹೀಗೆ ಇರಲಿ ಎಂದು ಆಶಿಸುತ್ತೇವೆ.

--ಚಿತ್ರ ವಿಚಿತ್ರ ತಂಡ

10 comments:

NiTiN Muttige said...

chennagide keep it up

ಪಾಲಚಂದ್ರ said...

heegoo unte!

ಸಿಮೆಂಟು ಮರಳಿನ ಮಧ್ಯೆ said...

ಚೆನ್ನಾಗಿದೆ....

ನಿಮ್ಮ ಅನ್ವೇಷಣೆ ಹೀಗೆ ನಡೆಯುತ್ತಲಿರಲಿ...

ಐವತ್ತು.. ನೂರಾಗಿ...

ಸಾವಿರ...ಲಕ್ಷವಾಗಲಿ...

ಶುಭವಾಗಲಿ...

ಕಟ್ಟೆ ಶಂಕ್ರ said...

ಲಕ್ಷ್ಮಕ್ಕ, ನಿಮ್ಮ ಫಲಕೊತ್ಸವ ಆಗ್ಲೇ ಹಾಫ್ ಸೆಂಚುರಿ ಬಾರಿಸಿದ್ಯಾ ?
ಸಖತ್ ಕಣ್ರೀ. ಆದಷ್ಟು ಬೇಗ ಸೆಂಚುರಿ ಬಾರಿಸಲಿ ಅಂತ ನಮ್ಮ ಆಶಯ.
ನಾನು ಆಟೋ ಫೋಟೋ ತೆಗೀತಾ ಇದ್ದೆ, ನೀವು ಫಲಕಗಳದ್ದು.
ಆಲ್ ದಿ ಬೆಸ್ಟ್ ಲಕ್ಷ್ಮಕ್ಕ. ಕಂಗ್ರಾಟ್ಸ್ ಆನ್ ಹಾಫ್ ಸೆಂಚುರಿ.
ಕಟ್ಟೆ ಶಂಕ್ರ

shivu said...

ಲಕ್ಷ್ಮಿ ಮೇಡಮ್,

ನಾನು ಸೂಪರ್ ಅಂದರೆ ಕನ್ನಡವನ್ನು ನನ್ನ ಬಾಷೆಯನ್ನು ನಾನೇ ಕಾಲೆಳೆದಂತಾಗುತ್ತದೆ....ಅದರೂ ಇದನ್ನು ಗುರುತಿಸಿ ಹಾಕಿದ್ದಕ್ಕೆ ಮತ್ತು ನಿಮ್ಮ ಈ ಉತ್ಸವಕ್ಕೆ ೫೦ ತುಂಬಿದಕ್ಕೆ ಅಭಿನಂದನೆಗಳು....

ಇದು ಮುಂದೆ ೧೦೦....೫೦೦...ಸಾವಿರವಾಗಲಿ....

ಅಸತ್ಯ ಅನ್ವೇಷಿ said...

ಐವತ್ತನೇ ಪೋಸ್ಟಿಗೆ ನಮ್ಮ ವಿ-ಚಿತ್ರ ಹಾಕಿದ್ದಕ್ಕೆ ಥ್ಯಾಂಕ್ಸ್.

ಆದ್ರೆ, ಮೊದಲ ಪ್ಯಾರಾದಲ್ಲಿ ಮೊದಲ ಸಾಲಿನಲ್ಲಿ ಸಿಕ್ಕಾಪಟ್ಟೆ 'ಅ'ಗಳಿರುವುದರಿಂದ ಮೊದಲೆರಡು 'ಅ'ಗಳನ್ನು ತೆಗೆದುಹಾಕಿದ್ದಿದ್ದರೆ, ಈ ಚಿತ್ರಕ್ಕೆ ನೋ-Bell ಪ್ರಶಸ್ತಿ ಕೊಡಿಸಲು ಪ್ರಯತ್ನಿಸಬಹುದಿತ್ತು ಅಂತ ಅನ್ವೇಷಕರು ತಿಳಿಸಿದ್ದಾರೆ.

admin said...

i really enjoyed!
i never knew blog can be created in kannada!
i have plenty of pics..
i gonna send u...

ಅಂತರ್ವಾಣಿ said...

lol

malnad said...

Lakshmi-ji,

Congrats for 50 not out.

Srikanth - ಶ್ರೀಕಾಂತ said...

tamilnadu li kannada kanDidde doDDa vichitra ree... adikkinta ee chitra vichitra alla biDi...