ಪರೀಕ್ಷೆ 1. ಇದೊಂದು ಆಂಗ್ಲ ಫಲಕ. ಇದರಲ್ಲಿ ಅವರು ಮಾರಾಟಕ್ಕೆ ಇಟ್ಟಿರುವ ವಸ್ತು ಏನೆಂದು ನೀವು ಕಂಡುಹಿಡಿಯಬೇಕು. ನಿಮಗೆ ಸ್ಪೆಲ್ಲಿಂಗ್ ಅರ್ಥವಾದರೆ ಮತ್ತು ನೀವು ಈ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ನಾವು ನಿಮಗೆ "ಪ್ರಳಯಾಂತಕ ಬುದ್ಧಿವಂತ"ಎಂಬ ಬಿರುದನ್ನ ಪ್ರದಾನ ಮಾಡುತ್ತೇವೆ. [:)]

ಫೋಟೋ: ಲಕ್ಷ್ಮೀ.
ಪರೀಕ್ಷೆ 2. ಈ ಫಲಕದಲ್ಲಿ ಎಷ್ಟು ತಪ್ಪುಗಳಿವೆ ಅಂತ ನೀವು ಎಣಿಸಿ ನಮಗೆ ಹೇಳಬೇಕು. ಇದರಲ್ಲಿ ಉತ್ತೀರ್ಣರಾದವರಿಗೆ "ಸಂಖ್ಯಾಶಾಸ್ತ್ರ ಶಿರೋಮಣಿ" ಎಂಬ ಬಿರುದನ್ನು ನೀಡಲಾಗುತ್ತದೆ.

ಫೋಟೋ: ಜಯಶಂಕರ್ ಎ. ಎನ್. [http://anjshankar.blogspot.com]
ಎರಡು ಫೋಟೋ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ " ಪ್ರಕಾಂಡ ಪಂಡಿತ" ಅನ್ನೋ ಸರ್ಟಿಫಿಕೇಟನ್ನು ನೀಡಲಾಗುತ್ತೆ.
By the way, ಉತ್ತರ ಮುಂದಿನ ವಾರ.
7 comments:
ನಿಮ್ಮ ನಿರ೦ತರ ಹುಡುಕಾಟಕ್ಕೆ ಇ೦ತಹ ಅವಾ೦ತರಗಳು ಸಿಗುತ್ತವಲ್ಲ. ಜೈ ಹೋ
ಪಾಪ ಅವರು fernechr ಅನ್ನೋ ವಸ್ತು ಮಾರಾಟಕ್ಕಿಟ್ಟಿದ್ದಾರೆ ನೀವು ಅದನ್ನು furniture ಅಂತ ಮಿಸ್ಟೇಕ್ ಮಾಡಿಕೊಂಡ್ರೆ ಅವರೇನು ಮಾಡೋಕಾಗುತ್ತೆ?
ಸಂದೀಪ್ ಕಾಮತರ ಉತ್ತರ ಖುಷಿಯಾಯಿತು...
ನಿಮ್ಮ ಹುಡುಕಾಟ ಚೆನ್ನಾಗಿದೆ...
ಅಯ್ಯೋ ಅದೇನೋ ಹೊಸ ಆಕ್ಷರ ಪ್ರಯೋಗ ಮಾಡುತ್ತಿರುವಾಗ ನೀವ್ಯಾಕೆ ಅವರಿಗೆ ತೊಂದರೆ ಕೊಡೋದು...
ಒಳ್ಳೆಯ ಫಲಕಗಳು ನಿಮ್ಮಿಂದ ಹಾಗೆ ಅದಕ್ಕೆ ಉತ್ತರ ಸಂದೀಪ್ ಕಾಮತ್ ರವರಿಂದ ಬಂದಿದೆ ಹ ಹಾ ಹಾ.. ಎಲ್ಲಾ ಬಿರುದು ನೀವೇ ಇಟ್ಟುಕೊಳ್ಳಿ ಏಕೆಂದರೆ ಈ ಫಲಕ ಹುಡುಕಾಟವೆಲ್ಲ ನಿಮ್ಮದೇ ಅಲ್ಲವೇ? ಹಾ ಹಾ ಹಾಹ
ವಂದನೆಗಳು
ಯಾವ angleನಿಣ್ದ ನೋಡಿದ್ರೂ ಅದು ಫರ್ನಿಚರ್ ಅಂಗಡಿ ಥರ ಕಾಣಿಸ್ತಾ ಇಲ್ಲ ನಂಗೆ!
ಶೌಚಾಲಯದ ಥರ ಇದೆ ನೋಡೋದಿಕ್ಕೆ :( ಅಲ್ಲಿ ಏನ್ ಮಾರ್ತಾರೋ ದೇವರಿಗೇ ಗೊತ್ತು!
ಮೊದಲ ಫೋಟೋಗೆ ಉತ್ತರ ಗೊತ್ತಾಯ್ತು. Furniture.
ಎರಡನೆಯದು ನಾನೇ set ಮಾಡಿರೋದು. ಹಾಗಾಗಿ ಉತ್ತರಿಸುವಹಾಗಿಲ್ಲ.
Post a Comment