Tuesday, March 31, 2009

ಫಲಕೋತ್ಸವ ಸೀಸನ್ ಎರಡು - ೨೨

ಪ್ರತಿ ಸಲ ಒಂದೊಂದೇ ಫೋಟೋ ನೋಡುತ್ತಿದ್ದಿರಿ...ಈ ಬಾರಿ ಎರಡು ವಿಚಿತ್ರ ವಿಶೇಷಗಳನ್ನ ನಿಮ್ಮ ಮುಂದಿಡುತ್ತಿದ್ದೇನೆ. ಮೊದಲ ಚಿತ್ರವನ್ನ ಕಳಿಸಿಕೊಟ್ಟವರು ಗಣೇಶ್ ನಮನ ಅವರು. "Site for sale" ಅಂತ ಸಾರ್ವಜನಿಕ ಸ್ವತ್ತಾದ ಬಸ್ ನಿಲ್ದಾಣದ ಮುಂದೆ ಹಾಕಿದ್ದಾರೆ. ನೋಡಿದವರಿಗೆ ಬಸ್ ಸ್ಟಾಪ್ ಮಾರಾಟಕ್ಕಿದೆ ಅನ್ನುವ ಹಾಗನ್ನಿಸತ್ತೆ ಅಂತ ಗಣೇಶ್ ಅವರಿಗೆ ಅನ್ನಿಸಿ ನಮಗೆ ಫೋಟೋ ಕಳಿಸಿದ್ದಾರೆ.




ಇನ್ನೊಂದು ಅತ್ಯದ್ಭುತ, ಅದ್ವಿತೀಯ ಫೋಟೋ. ದೇಶದ ಪ್ರಮುಖ ಪಕ್ಷ ಒಂದು ತನ್ನ ಕಚೇರಿಯನ್ನು ಇಲ್ಲಿ ಸ್ಥಾಪಿಸಲಾಗಿದೆ ಅಂತ ಫಲಕ ಹಾಕಿದೆ. ನಿಮಗೆ ಕಟ್ಟಡ ಕಾಣತ್ತಾ ? ನೀವು ದುರ್ಬೀನು, ಟೆಲೆಸ್ಕೋಪು, ಮೈಕ್ರೋಸ್ಕೋಪ್ ಇಟ್ಟುಕೊಂಡು ನೋಡಿ ಬೇಕಿದ್ರೆ !
ಈ ಫೋಟೋ ಕಳಿಸಿಕೊಟ್ಟವರು ಶ್ರೀಕಾಂತ್ ಕೆ.ಎಸ್.


Tuesday, March 24, 2009

ಫಲಕೋತ್ಸವ ಸೀಸನ್ ಎರಡು - ೨೧


ಇದರ ಬಗ್ಗೆ ನಾನು ಏನೂ ಮಾತಾಡಕ್ಕೇ ಹೋಗಲ್ಲ !

ಫೋಟೋ : ಲಕ್ಷ್ಮೀ

Tuesday, March 17, 2009

ಫಲಕೋತ್ಸವ ಸೀಸನ್ ಎರಡು - ೨೦


ಕೈ ತೋರಿದಲ್ಲಿ ನಿಲ್ಲುವ ವಾಹನ ಅಂತ ಇದೆ. ಇದನ್ನ ನೋಡಿದ ಮೇಲೆ ನನಗೆ ಮೂಡಿದ ಪ್ರಶ್ನೆಗಳು ಇವು:

೧. brakes = ಕೈ. ಹೌದಾ ?

೨. ಕೈ ತೋರಿದರೆ ನಿಲ್ಲತ್ತೆ. ನಿಂತ ಮೇಲೆ ಮತ್ತೆ ಹೇಗೆ ಮುಂದುವರಿಯುತ್ತೆ ? ಅದಕ್ಕೆ ಕಾಲು ತೋರಿಸಬೇಕಾ ಅಥವಾ ಕಾಲು ಕೊಡಬೇಕಾ ?

ಫೋಟೋ ಕಳಿಸಿದವರು : ಶ್ರೀಕಾಂತ್ ಕೆ.ಎಸ್.[ಮನಸಿನ ಪುಟಗಳ ನಡುವೆ ಬ್ಲಾಗಿನವರು]

Tuesday, March 10, 2009

ಫಲಕೋತ್ಸವ ಸೀಸನ್ ಎರಡು - ೧೯

ಫೋಟೋ ಕಳಿಸಿದವರು ಶ್ರೀಕಾಂತ್ ಕೆ.ಎಸ್.


ಈ ಫಲಕದಲ್ಲಿ ಬರೆದಿರೋದನ್ನ ಒಂದೇ ಬಾರಿಗೆ ಪೂರ್ತಿ ಓದಿಕೊಂಡುಬಿಡಿ , ಮಧ್ಯದಲ್ಲೆಲ್ಲೂ pause ಮಾಡಕೂಡದು :)

Tuesday, March 3, 2009

ಫಲಕೋತ್ಸವ ಸೀಸನ್ ಎರಡು - ೧೮



ಈ ಫೋಟೋವನ್ನು ಕಳಿಸಿದವರು ಸಹ ಬ್ಲಾಗಿಗ ಶ್ರೀನಿವಾಸ ರಾಜನ್(ಗಂಡಭೇರುಂಡ) . ಹೋಟೆಲ್ ಒಂದರಲ್ಲಿ ದೊಡ್ಡ ಕನ್ನಡಿಯನ್ನಿಟ್ಟು" " ಇಲ್ಲಿ ತಲೆ ಬಾಚಿಕೊಳ್ಳುವ ಹಾಗಿಲ್ಲ"ಅಂತ ಹಾಕಿದರೆ ಕನ್ನಡಿ ಇರೋದು ಯಾಕೆ ? " ಅಂತ ಅವರ ಪ್ರಶ್ನೆ. ಮತ್ತು ಅವರಿಗೆ ಆಂಗ್ಲದಲ್ಲಿ ಬರೆಯುವುದು ಹೇಗೆಂದು ಗೊತ್ತಾಗದೆ ಸಿಕ್ಕಾಪಟ್ಟೆ ಕನ್ ಫ್ಯೂಸ್ ಆಗಿರೋದನ್ನ ನೀವು ಆ ಫಲಕದಲ್ಲೇ ನೋಡಬಹುದು.

Sunday, March 1, 2009

ಚಿತ್ರ ವಿಚಿತ್ರಕ್ಕೆ ಒಂದು ವರ್ಷ

ನನ್ನ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದ ವಿಚಿತ್ರ ಚಿತ್ರಗಳನ್ನು ಹಾಕಲಿಕ್ಕೆಂದು ಶುರು ಮಾಡಿದ ಈ ಪುಟ್ಟ ಫೋಟೋಬ್ಲಾಗು ಇಂದು ನಿಮ್ಮೆಲ್ಲರ ಪ್ರೋತ್ಸಾಹ, ಕೊಡುಗೆ ಮತ್ತು ಭಾಗವಹಿಸುವಿಕೆಯಿಂದ ಇಂದಿಗೆ ಒಂದು ವರ್ಷ ಪೂರೈಸಿದೆ. ಪರಿಸರಪ್ರೇಮಿ ಅರುಣರ ಕೊಡುಗೆ, ಸಲಹೆ ಮತ್ತು ಮಾರ್ಗದರ್ಶನದಲ್ಲಿ,ಶ್ರೀಕಾಂತ್ ಹಾಗೂ ಶ್ರೀನಿವಾಸ್ ಅವರ ಚಿತ್ರಕೊಡುಗೆಗಳಿಂದ ಶುರುವಾದ ಈ ಬ್ಲಾಗು ಆನಂತರದಲ್ಲಿ ಓದುಗ ಬಾಂಧವರಿಂದ ಕೊಡುಗೆಗಳನ್ನು ಸ್ವೀಕರಿಸುವ ಮಟ್ಟಕ್ಕೆ ಈಗ ಬೆಳೆದು ನಿಂತಿದೆ. ಫಲಕೋತ್ಸವ ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಯಶಸ್ಸನ್ನು ಕಂಡು ಈಗ ಎರಡನೆಯ ಸೀಸನ್ ನಡೆಯುತ್ತಿದೆ. ಈ ಸಂದರ್ಭದಲ್ಲಿ ನಾನು ಬ್ಲಾಗ್ ಯಶಸ್ವಿಯಾಗಲು ಸಹಕರಿಸಿ ಪ್ರೋತ್ಸಾಹಿಸಿದ ನಿಮ್ಮೆಲ್ಲರಿಗೂ ಕೃತಜ್ಞಳಾಗಿದ್ದೇನೆ.

ನಾವು ಫೋಟೋ ತೆಗೆಯಲು ಕ್ಯಾಮೆರಾ ಇರಲೇಬೇಕಲ್ಲವೇ ? ಮೊಬೈಲೋ, ಡಿಜಿಕ್ಯಾಮೋ, ಎಸ್ ಎಲ್ ಆರ್ , ಯಾವುದಿರಲಿ, ನಾನು ಅದಕ್ಕೂ ಕೃತಜ್ಞಳು.ಈ ಸಂದರ್ಭದಲ್ಲಿ ಕ್ಯಾಮೆರಾ ಬೆಳೆದು ಬಂದ ದಾರಿಯ ಒಂದು ಪುಟ್ಟ ಪರಿಚಯ ಮಾಡಿಕೊಳ್ಳುವುದು ಸೂಕ್ತ ಎನಿಸುತ್ತದೆ.

ಕ್ಯಾಮೆರಾದ ಮೊದಲ ರೂಪ ಕ್ಯಾಮೆರಾ ಒಬ್ಸ್ ಕ್ಯೂರಾ (camera obscura). ಇದನ್ನು ಕಂಡುಹಿಡಿದವರು ಇರಾನಿಯನ್ ವಿಜ್ಞಾನಿ Ibn al-Haytham (Alhazen).





ಅಂದಿನಿಂದ ೧೯೯೦ವರೆಗೆ ಆದ ಬೆಳವಣಿಗೆಯನ್ನು ಈ ಲಿಂಕಿನಲ್ಲಿ ಕಾಣಬಹುದು.


ಡಿಜಿಟಲ್ ಫೋಟೋಗ್ರಫಿಯ ಬಗ್ಗೆ ಹೆಚ್ಚು ಜನಕ್ಕೆ ಗೊತ್ತಿದೆ.ಆದ್ದರಿಂದ ಅದನ್ನು ವಿವರಿಸುವ ಅವಶ್ಯಕತೆಯಿಲ್ಲ ಎಂದುಕೊಳ್ಳುತ್ತೇನೆ.

ಈ ಬ್ಲಾಗಿನ ಉಗಮಕ್ಕೆ ಕಾರಣವಾದ ನನ್ನ ಮೊಬೈಲ್ ಫೋನ್ ಮತ್ತು ನಮ್ಮ ತಂಡದ ಮೊಬೈಲ್ ಫೋನ್ ಗಳು ಹಾಗೂ ಕ್ಯಾಮೆರಾಗಳಿಗೆ, ಮತ್ತು ನಿಮ್ಮೆಲ್ಲರ ಕ್ಯಾಮೆರಾಗಳಿಗೂ ಒಂದೊಂದು ಥ್ಯಾಂಕ್ಸ್ !

ಫೋಟೋ ಕೃಪೆ: ವಿಕಿಪೀಡಿಯಾ.