Tuesday, December 27, 2011

ಫಲಕೋತ್ಸವ-ಸೀಸನ್ ೩-೩೯


ನಮ್ಮ ಮೈಸೂರಿನ ಜಿ.ಟಿ.ಆರ್. ಹೋಟೇಲಿನಲ್ಲಿ ಕಂಡ ಫಲಕ :-)

ಫೋಟೋ ಕೃಪೆ: ಚೈತನ್ಯ ಎನ್.

Tuesday, December 20, 2011

ಫಲಕೋತ್ಸವ ಸೀಸನ್ ೩-೩೮


ಫಲಕದ ಬಗ್ಗೆ ಮಾತಿಲ್ಲ...ನೋಡಿಬಿಡಿ.

ಫೋಟೋ ಕೃಪೆ: ಚೈತನ್ಯ ಎನ್.


Tuesday, December 13, 2011

ಫಲಕೋತ್ಸವ ಸೀಸನ್ ೩-೩೭



ಮಹಾ ಸೇಲ್ + ಮೆಗಾ ಸೇಲ್ = ಮಗಾ ಸೇಲ್ ಇರಬಹುದೇ ? ;-) ತಮಿಳುನಾಡಿನ ಮತ್ತೊಂದು ಫಲಕ :-)



ಚಿತ್ರಕೃಪೆ: ಚೈತನ್ಯ ಎನ್.

Tuesday, December 6, 2011

Tuesday, November 29, 2011

ಫಲಕೋತ್ಸವ ಸೀಸನ್ ೩-೩೫


ಊಟಿಯ ಬಳಿ ಕಂಡ ಫಲಕ. ನನಗಂತೂ ಅರ್ಥವಾಗಲಿಲ್ಲ.ನಿಮಗೇನಾದರೂ ಅರ್ಥವಾಯಿತೇ ?

ಫೋಟೋ ಕೃಪೆ: ಚೈತನ್ಯ ಎನ್.




Tuesday, November 22, 2011

ಫಲಕೋತ್ಸವ ಸೀಸನ್ ೩-೩೪




ಛಾಯಾ ಪಾಪ ಯಾಕೆ ಫೋಟೋ ತೆಗೆಯಬಾರದು ? ಪದದ ಮಧ್ಯದಲ್ಲಿ ಒಂದು ಸ್ಪೇಸ್ ಏನಲ್ಲಾ ಅರ್ಥಗಳನ್ನು ಕೊಡಬಹುದು ಅಲ್ವ ?

ಫೋಟೋ ಕೃಪೆ: ಅರುಣ್ ಎಲ್.

Tuesday, November 15, 2011

ಫಲಕೋತ್ಸವ ಸೀಸನ್ ೩-೩೩

ಕನ್ನಡ ರಾಜ್ಯೋತ್ಸವದ ಸುಸಂದರ್ಭದಲ್ಲಿ ಅನುಭವ ಮಂಟಪದ ಪಾಲಚಂದ್ರ ಅವರು ಕಳಿಸಿಕೊಟ್ಟ ಈ ಚಿತ್ರಗಳನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸಲು ಇಚ್ಚಿಸುತ್ತೇವೆ. ಚಿತ್ರದ ಬಗ್ಗೆ ನಾವೇನೂ ಮಾತಾಡುವ ಹಾಗಿಲ್ಲ. ಕನ್ನಡ ತಾಯಿ ಭುವನೇಶ್ವರಿಯನ್ನು ತಾಯಿ ಭುವನೇಶ್ವರಿಯೇ ಕಾಪಾಡಿಕೊಳ್ಳಬೇಕು ಅಷ್ಟೇ !ಜೈ ಕರ್ನಾಟಕ.


ಚಿತ್ರ ಕೃಪೆ: ಪಾಲಚಂದ್ರ

Friday, November 4, 2011

ಫಲಕೋತ್ಸವ ಸೀಸನ್ ೩-೩೨

ಇಷ್ಟು ದಿನದಿಂದ ಬ್ಲಾಗ್ ಗೆ ಯಾವುದೇ ಪೋಸ್ಟುಗಳನ್ನು ಹಾಕದೇ ಇದ್ದುದಕ್ಕೆ ಕ್ಷಮೆ ಯಾಚಿಸುತ್ತಾ, ಅಭಿಮಾನಿಗಳೊಬ್ಬರು ಕಳಿಸಿಕೊಟ್ಟ ಫೋಟೋದಿಂದ ಸರಣಿಯನ್ನು ಮುಂದುವರೆಸುತ್ತಿದ್ದೇವೆ. ಫೋಟೋಗಳನ್ನು ಕಳಿಸಿಕೊಟ್ಟ ಶಿವಚಂದ್ರ ಅವರಿಗೆ ಕೃತಜ್ಞತೆಗಳನ್ನು ತಿಳಿಸುತ್ತಿದ್ದೇವೆ.

ಅವರ ಅನಿಸಿಕೆಗಳು:
These 2 snaps which i had captured @ wayanad last month .

We often find some Funny English Information Board at Kerala
and that also at a Tourist Place especially.

Really feeling bad to to see such Spelling mistakes at a Place where they say 100% literate state.

ಫೋಟೋಗಳು:





Tuesday, May 24, 2011

Tuesday, May 17, 2011

ಫಲಕೋತ್ಸವ-ಸೀಸನ್ ೩-೨೦

ಬೆಂಗಳೂರಿನಲ್ಲಿ ಡೆಲ್ಲಿ ಮೆಟ್ರೋ ಬೋರ್ಡು ! ಅದೂ ಕನ್ನಡದಲ್ಲಿ !ಜೈ ಮೆಟ್ರೋ ! ಜೈ ಕರ್ನಾಟಕ ಮಾತೆ !

ಫೋಟೋ ಕೃಪೆ: ಶ್ರೀನಿಧಿ ಡಿ.ಎಸ್.

Tuesday, May 10, 2011

ಫಲಕೋತ್ಸವ-ಸೀಸನ್ ೩-೧೯


ಕನ್ನಡ, ಇಂಗ್ಲಿಷ್ ಮತ್ತು ಸಂಸ್ಕೃತವನ್ನು ೧:೧:೧ ಅನುಪಾತದಲ್ಲಿ ಮಿಶ್ರಣ ಮಾಡಿ, ಈ ಬೋರ್ಡನ್ನು ಬರೆಯಲಾಗಿದೆ.ಆಂಗ್ಲ ಪದಕ್ಕೆ ಸಂಸ್ಕೃತದ ವಿಭಕ್ತಿ ಸೇರಿಸಿ ಆ ಹೊಸ ಪದವನ್ನು ಕನ್ನಡದಲ್ಲಿ ಬರೆದಿರುವ ಈ ಪುಣ್ಯಾತ್ಮನಿಗೇ ಔಷಧಿಯ ಅವಶ್ಯಕತೆ ಇದೆ ಅಂತ ನನಗೆ ಅನ್ನಿಸಿತು.ಸಾಲದಕ್ಕೆ, ಆಂಗ್ಲವನ್ನು ಸಾರಾಸಗಟಾಗಿ ಕೊಲೆಗೈದಿದ್ದಾನೆ.

ಈ ಫೋಟೋ ನಾನೇ ತೆಗೆದಿದ್ದಾದರೂ ಇದರ  ಹಿಂದೆ ಒಂದು ಸ್ವಾರಸ್ಯಕರ ಕತೆ ಇದೆ. ಒಂದು ಮದ್ಯಾಹ್ನ ನಮ್ಮ ತಂದೆ ಫೋನ್ ಮಾಡಿ, "ಲಕ್ಷ್ಮೀ, ನಾನು ಮತ್ತು ನಿಮ್ಮಮ್ಮ ವಿದ್ಯಾರ್ಥಿ ಭವನದಲ್ಲಿ ದೋಸೆ ತಿಂತಿದಿವಿ, ನೀನು ಫ್ರೀ ಇದ್ರೆ ಬಾ" ಅಂತ ಅಂದ್ರು. ನನಗೆ ವಿದ್ಯಾರ್ಥಿ ಭವನದ ದೋಸೆ ಅಂದರೆ ಪಂಚಪ್ರಾಣ. ನಾನು ಆಗ ಕಡೆಯ ಸೆಮ್ ಎಮ್.ಎಸ್ಸಿ ಓದ್ತಿದ್ದೆ. ಲ್ಯಾಬ್ ಇರ್ಲಿಲ್ಲ ಆದ್ದರಿಂದ ಆಟೋ ದಲ್ಲಿ ಗಾಂಧಿ ಬಜಾರಿಗೆ ಬಂದೆ. ವಿದ್ಯಾರ್ಥಿ ಭವನದಲ್ಲಿ ದೋಸೆ ತಿಂದ ನಂತರ, ಅಣ್ಣ, " ನೀನೊಂದು ಫೋಟೋ ತೆಗಿಬೇಕು" ಅಂದ್ರು. ನಾನು " ದೋಸೆದಾ ?" ಅಂದೆ. ಅದಕ್ಕೆ ಅವ್ರು, ಇಲ್ಲ, ಒಂದು ಬೋರ್ಡ್ ದು. ನಿನ್ನ ಬ್ಲಾಗಿಗೆ ಸರಿಗಿರತ್ತೆ " ಅಂದ್ರು.ನನಗೆ ಆಗ್ಲೆ ಗೊತ್ತಾಗಿದ್ದು, ಸ್ವತಃ ಸ್ವಯಂ ಸಾಕ್ಷಾತ್ ನಮ್ಮಪ್ಪ ಈ ಬ್ಲಾಗ್ ನ ಫಾಲೋ ಮಾಡ್ತಾರೆ ಅಂತ. ವಿದ್ಯಾರ್ಥಿ ಭವನದ ಪಕ್ಕದಲ್ಲಿರೋ ಈ ಮೆಡಿಕಲ್ ಶಾಪಿನ ಬೋರ್ಡನ್ನು ತೋರಿಸಿ, "ನೋಡು, ಹೇಗಿದೆ ಹೊಸ ಪದದ ಆವಿಷ್ಕಾರ!" ಅಂದ್ರು. ನಾನು ನಮ್ಮಪ್ಪಂಗೆ, "ಎಂಥಾ ಬೋರ್ಡ್ ಅಣ್ಣಾ...ಸಕ್ಕತ್ತಾಗಿದೆ" ಅಂತ ಶಭಾಶ್ ಗಿರಿ ಕೊಟ್ಟು ಕ್ಲಿಕ್ಕಿಸಿದ ಫೋಟೋ ಇದು.

Tuesday, April 26, 2011

ಫಲಕೋತ್ಸವ ಸೀಸನ್ ೩-೧೭

ಈ ಫಲಕದಲ್ಲಿರುವ ಎಲ್ಲಾ ಊರುಗಳನ್ನು, ಇದೇ ಸ್ಪೆಲ್ಲಿಂಗುಗಳನ್ನ ಯಥಾವತ್ ಗೂಗಲ್  ಮ್ಯಾಪ್ಸ್ ನಲ್ಲಿ ಹಾಕಿ[ಸ್ಪೆಲ್ ಚೆಕ್ ಎಲ್ಲಾ ಹಾಕುವಂತಿಲ್ಲ]ಈ ಎಲ್ಲಾ ಜಾಗಗಳನ್ನು ಹುಡುಕಿ, ಮ್ಯಾಪ್ ಮಾಡಿಕೊಟ್ಟವರಿಗೆ " ಪ್ರಪಂಚಪರ್ಯಟನಾ ನಿಸ್ಸೀಮ" ಅನ್ನುವ ಬಿರುದನ್ನು ಪ್ರದಾನ ಮಾಡಲಾಗುತ್ತದೆ.




ಫೋಟೋ: ಲಕ್ಷ್ಮೀ

Tuesday, April 19, 2011

ಫಲಕೋತ್ಸವ-ಸೀಸನ್ ೩-೧೬



ಫೋಟೋದಲ್ಲಿದ್ದವರಿಗೆ ಫೋಟೋ ಕೆಳಗೆ ಬರೆದಿರುವ ಸ್ಪೆಲ್ಲಿಂಗ್ ಕಾಣೋದಿಲ್ಲ ಆದ್ದರಿಂದ, ಅವರು ಫೋಟೋದಲ್ಲಿ ಶಾಂತರಾಗಿದ್ದಾರೆ.ಇಲ್ಲಾಂದ್ರೆ ಕ್ರಾಂತಿ ಮೇಲೆ ಕ್ರಾಂತಿ ಆಗಿರ್ತಿತ್ತು ! ಎಂಥಾ ಮುಖಗಳು, ಏನದ್ಭುತ ಸ್ಪೆಲ್ಲಿಂಗು...

Wednesday, April 13, 2011

ಫಲಕೋತ್ಸವ-ಸೀಸನ್ ೩-೧೫


ಎಷ್ಟೇ ಕೇರ್ ತಗೊಂಡ್ರೂ accidents ಆಗೇ ಆಗತ್ತೆ ಎಂದು ಈ ಫಲಕವನ್ನು ಅರ್ಥೈಸಬಹುದೇ ? ;) ಜೆ.ಸಿ ರೋಡ್ ಸಿಗ್ನಲ್ಲಿನಲ್ಲಿ ತೆಗೆದ ಫೋಟೋ.

ಫೋಟೋ: ಲಕ್ಷ್ಮೀ