Tuesday, December 30, 2008

ಫಲಕೋತ್ಸವ ಸೀಸನ್ ಎರಡು - ೯

ಬ್ಯೂಟಿ ಪಾರ್ಲರ್ ಗಳಲ್ಲಿ ಇದು "Advanced"ಅಂತೆ. ಪಾರ್ಲರ್ ಸ್ಪೆಲ್ಲಿಂಗನ್ನು ಗಮನಿಸಿ.ಹಾಗೇ...arrow head ತೋರಿಸಿ 44 ಅಂತ ಬರ್ದಿದಾರೆ. ಏನಂತ ಅರ್ಥ ಮಾಡ್ಕೊಬೇಕು ಇದನ್ನ ? 44 ಹೆಜ್ಜೆ ಆದ್ಮೇಲೆ ಪಾರ್ಲರ್ ಅಂತಾನ ? ಅಥ್ವಾ ನಲ್ವತ್ತ್ನಾಲ್ಕನೇ ಬಿಲ್ಡಿಂಗ್ ನಲ್ಲಿ ಈ ಪರ್ಲರ್ ಇದೆ ಅಂತಾನಾ ? ಅಡ್ರೆಸ್ಸೇ ಕೊಡದ ಮಹಾಶಯ ಮೊಬೈಲ್ ನಂಬರ್ರನ್ನು ಕೊಟ್ಟಿರುವುದು ನೋಡಿದರೆ ಜನರು ಫೋನ್ ಮಾಡಿ, ಅಪಾಯಿಂಟ್ಮೆಂಟ್ ತಗೊಂಡೇ ಹೋಗಬೇಕೆನ್ನಿಸುತ್ತದೆ!

ಫೋಟೋ ಕೃಪೆ: ಶ್ರೀಕಾಂತ್.ಕೆ.ಎಸ್.

Tuesday, December 23, 2008

ಫಲಕೋತ್ಸವ ಸೀಸನ್ ಎರಡು - ೮

ನಮ್ಮ ತಲೆಯ ಬಗ್ಗೆ ಇವರಿಗೆ ಏನು ಕಾಳಜಿ ಏನ್ ಕಥೆ ! ತಲೆ ಹೊಡೆಸಿಕೊಂಡು ಆಸ್ಪತ್ರೆ ಸೇರದಿರಿ ಎಂದು warn ಮಾಡುವ ರೀತಿ ಚೆನ್ನಾಗಿದೆ ಅಲ್ವಾ ? Mind your head ಅಂತೆ...!! ಅಲ್ಲ...ಜನರು ಮೆಟ್ಟಿಲು ಮೇಲೆ ಏನು ಬರೆದಿದ್ದಾರೆ ಎಂದು ನೋಡಿಕೊಂಡು ಹತ್ತದೇ ಇದ್ದರೆ ಈ warning ಉದ್ದೇಶ ಸಾರ್ಥವಾಗದು. ಆದರೂ ಇವರ ಪ್ರಯತ್ನ ಮೆಚ್ಚತಕ್ಕದ್ದು. ಈ ಬಾರಿ ಇದು ವಿಶೇಷ ಫಲಕ.

ಫೋಟೋ ಕೃಪೆ: ಅರುಣ್ ಎಲ್ (ಪರಿಸರಪ್ರೇಮಿ)

Tuesday, December 16, 2008

ಫಲಕೋತ್ಸವ ಸೀಸನ್ ಎರಡು - ೭

ಎರಡು complementary ಫಲಕಗಳು. "ತಿರುಮಲ ಹೈರ್ ಸ್ಟೈಲ್" ಮತ್ತು "ಉಗುಳಬೇಡಿ" ತಿರುಮಲದ ಹೈರ್ ಸ್ಟೈಲ್ ಮೇಲೆ ಉಗುಳಬೇಡಿ ಎಂದು ಅರ್ಥೈಸಿಕೊಳ್ಳಬೇಕೆ ?

ಫೋಟೋ ಕೃಪೆ: ಅರುಣ್ ಎಲ್.(ಪರಿಸರಪ್ರೇಮಿ)

Tuesday, December 9, 2008

ಫಲಕೋತ್ಸವ ಸೀಸನ್ ಎರಡು - ೬


ಈ ಚಿತ್ರದಲ್ಲಿ ಅನುಸ್ವಾರ ಮತ್ತು ಅಕ್ಷರ "ಯ" ವನ್ನು ಗಮನಿಸಿ. ಒಂಥರಾ different ಆಗಿ ಬರ್ದಿದಾರೆ. ಈ ಬಾರಿ ಇದು ವಿಶೇಷ ಚಿತ್ರ.

ಫೋಟೋ ಕೃಪೆ: ಅರುಣ್ . ಎಲ್ (ಪರಿಸರಪ್ರೇಮಿ)

Tuesday, December 2, 2008

ಫಲಕೋತ್ಸವ ಸೀಸನ್ ಎರಡು - ೫

ಅಲ್ಲಾ...ತಿನ್ನಲು ಲಾನನ್ನು ಬಳಸಬೇಡಿ ಅಂದಿದ್ದಾರೆ...ಲಾನನ್ನು ತಿನ್ನಲು ನಾವೇನು ದನಗಳೇ ? :P

ಫೋಟೋ ಕೃಪೆ: ಅರುಣ್ . ಎಲ್ (ಪರಿಸರಪ್ರೇಮಿ)

Tuesday, November 25, 2008

ಫಲಕೋತ್ಸವ ಸೀಸನ್ ಎರಡು - ೪

ನಿಮಗೆ ಈ ಫಲಕ ಅರ್ಥ ಆದರೆ ನನಗೂ ಅರ್ಥ ಮಾಡಿಸಿ. ಫ್ರೀ ಸಿಮ್ಮು ಅಂತಾರೆ, dead or alive ಅಂತಾರೆ, ಹಳೆ ಮೊಬೈಲ್ ಕೊಟ್ಟು ಹೊಸದು ಪಡೆಯಿರಿ ಅಂತಾರೆ, ಇದರಲ್ಲಿ ಯಾವುದು ಸತ್ತು ಯಾವುದು ಬದುಕಿರಬೇಕು ? ಸಿಮ್ಮಾ ?? ಫೋನಾ ??

ಫೋಟೋ : ಲಕ್ಷ್ಮೀ.

Tuesday, November 18, 2008

ಫಲಕೋತ್ಸವ ಸೀಸನ್ ಎರಡು - ೩


ನೀವು ಇದನ್ನು ನೋಡಿ ಸೈಕಾಲಜಿಯ ಸರಿಯಾದ ಸ್ಪೆಲ್ಲಿಂಗ್ ಯಾವುದೆಂದು ತಿಳಿಯದೇ confuse ಮಾಡಿಕೊಂಡರೆ ಅದಕ್ಕೆ ನಾವು ಜವಾಬ್ದಾರರಲ್ಲ :-) :-) :-)

ಫೋಟೋ : ಲಕ್ಷ್ಮೀ

Tuesday, November 11, 2008

ಫಲಕೋತ್ಸವ ಸೀಸನ್ ಎರಡು - ೨


ಕಿವಿಯನ್ನು ಬೋರ್ ವೆಲ್ಲ್ ಮಾಡಿರುವ ಪುಣ್ಯಾತ್ಮನೀತ ! "Ear piercing" ಬದಲು "Ear boring" ಅಂತ ಹಾಕಿದ್ದಾರೆ. ಕನ್ನಡದಲ್ಲಿಯಾದರೂ ಅರ್ಥ ನೆಟ್ಟಗೆ ಬರುವಂತೆ ಬರೆದಿದ್ದಾರಾ ? ಅದೂ ಇಲ್ಲ ! ಕಿವಿಗಳು ಚುಚ್ಚುವ ಸ್ಥಳ ಅಂತೆ! ವಿಭಕ್ತಿ ಪ್ರತ್ಯಯದ ಪಾಠ ಕಲ್ತಿಲ್ಲ ಪಾಪ....ಇದಕ್ಕೆ "ಕರ್ಣಕಾಂಡ" ಎಂಬ ಪದವೇ ಸರಿಯಾದ ವಿವರಣೆಯೇನೋ ಅನ್ನಿಸತ್ತೆ ನನಗೆ !

ಫೋಟೋ ಕೃಪೆ : ಪ್ರವೀಣ್ ಉಡುಪ.

Tuesday, November 4, 2008

ಫಲಕೋತ್ಸವ ಸೀಸನ್ ಎರಡು - ೧

ಫಲಕೋತ್ಸವ season 1 ಕಂಡ ಅಭೂತಪೂರ್ವ ಯಶಸ್ಸಿನಿಂದ ಪ್ರೇರಿತರಾಗಿ ಈಗ ಫಲಕೋತ್ಸವದ ಎರಡನೇ season ಅನ್ನು ಪ್ರಾರಂಭಿಸುತ್ತಿದ್ದೇವೆ.ಈ ಬಾರಿಯೂ ವಿಚಿತ್ರ, ವಿಶೇಷ, ನಾನಾರ್ಥಗಳುಳ್ಳ ಫಲಕಗಳ ಪ್ರದರ್ಶನ ನಡೆಯಲಿದೆ. ಕಳೆದ ಸರಣಿಯಂತೆಯೇ ಈ ಸೀಸನ್ ನಲ್ಲೂ ನಿಮ್ಮ ಪ್ರೋತ್ಸಾಹದಾಯಕ ಕಮೆಂಟುಗಳ ನಿರೀಕ್ಷೆಯಲ್ಲಿದ್ದೇವೆ.

ಈ ಬಾರಿಯ ಫೋಟೋ ತ್ರಿಸ್ಸೂರಿನ ದೇವಸ್ಥಾನದ ಭೋಜನಶಾಲೆಯದು. ಕನ್ನಡದ ಬರಹದಲ್ಲಿ ಆಗಿರುವ ಅವಾಂತರವನ್ನು ನೀವೇ ನೋಡಿ!

ಫೋಟೋ ಕೃಪೆ: ಪ್ರವೀಣ್ ಉಡುಪ.

Tuesday, October 28, 2008

ವಿಚಿತ್ರ ಕಸದಬುಟ್ಟಿಗಳು - ೫

ಈ ಫೋಟೋದೊಂದಿಗೆ ನಮ್ಮ ವಿಚಿತ್ರ ಕಸದ ಬುಟ್ಟಿಯ ಸರಣಿಯನ್ನು ಮುಗಿಸುತ್ತಿದ್ದೇವೆ.

ಫೋಟೋ ಕೃಪೆ : ಅಪರ್ಣ (ನನ್ನ ತಂಗಿ)

ತಳವೇ ಇಲ್ಲದ ಕಸದಬುಟ್ಟಿಯನ್ನು ನೋಡಿ ಆನಂದಿಸಿ.

ದೀಪಾವಳಿಯ ಶುಭಾಶಯಗಳು.





Tuesday, October 21, 2008

ವಿಚಿತ್ರ ಕಸದಬುಟ್ಟಿಗಳು - ೪


ಈ ಚಿತ್ರವನ್ನು ಇಲ್ಲಿ ಹಾಕಿರುವ ಉದ್ದೇಶ ಈ ಬಾರಿ ಸ್ವಲ್ಪ ಸೀರಿಯಸ್ಸಾಗಿದೆ. ಮರದ ಮೇಲೆ ಪ್ಲಾಸ್ಟಿಕ್ ಚೀಲಗಳಲ್ಲಿ ಕಸವನ್ನು ಕಟ್ಟಿ ನೇತುಹಾಕುವುದರಿಂದ ಏನಾದರೂ ಪ್ರಯೋಜನ ಇದೆಯಾ ? ಕಸವನ್ನು ಮರಗಳ ಬುಡಕ್ಕೆ ಹಾಕಿದರೆ ಗೊಬ್ಬರವಾದರೂ ಆಗುತ್ತಿತ್ತು. ಇದನ್ನರಿಯದೇ ಇರುವ, common sense ಕೂಡಾ ಇಲ್ಲದ ಜನಗಳೂ ಈ ಪ್ರಪಂಚದಲ್ಲಿದ್ದಾರೆ ಎಂದು ತೋರಿಸಲಿಕ್ಕೆ ಈ ಚಿತ್ರವನ್ನು ಹಾಕುತ್ತಿದ್ದೇನೆ. ಮರವನ್ನು ಕಸದಬುಟ್ಟಿಯನ್ನಾಗಿ ಮಾಡಿಕೊಂಡಿರುವುದು ವಿಚಿತ್ರ ವಿಪರ್ಯಾಸ.

Tuesday, October 14, 2008

ವಿಚಿತ್ರ ಕಸದಬುಟ್ಟಿಗಳು - ೩

ಈ ಬಾರಿ ವಿಚಿತ್ರವಾಗಿರುವುದು ಕಸದಬುಟ್ಟಿಯಲ್ಲ, ಅದನ್ನು ಸ್ಥಾಪಿಸಿರುವ ಸ್ಥಳ. ಪೋಸ್ಟ್ ಡಬ್ಬದ ಪಕ್ಕದಲ್ಲಿ ಇಟ್ಟಿದ್ದಾರೆ...ಒಂದು ವೇಳೆ ಕಸದ ಬುಟ್ಟಿಗೆ ಹೋಗಬೇಕಾದ ಕಾಗದ ಪೋಸ್ಟ್ ಡಬ್ಬದಲ್ಲಿ ಬಿದ್ದು, ಪೋಸ್ಟ್ ಆಗಬೇಕಿದ್ದ ಲಕೋಟೆ ಕಸದಬುಟ್ಟಿಯಲ್ಲಿ ಬಿದ್ದರೆ....just imagine ಮಾಡ್ಕೊಳ್ಳಿ....

ಫೋಟೋ ಕೃಪೆ : ಶ್ರೀನಿವಾಸ ರಾಜನ್

Tuesday, October 7, 2008

ವಿಚಿತ್ರ ಕಸದಬುಟ್ಟಿಗಳು - ೨


ಕಸದ ಬುಟ್ಟಿಯನ್ನು ಗ್ರಿಲ್ಲಿಗೆ ಕಟ್ಟಿಹಾಕಲಾಗಿದೆ. ಅದಕ್ಕೆ ಬೀಗವನ್ನೂ ಜಡಿಯಲಾಗಿದೆ. ಸುರಕ್ಷತೆಗಾಗಿ ಎಂಥಾ ಪ್ಲಾನ್ ನೋಡಿ !

Thursday, October 2, 2008

ಮಹಾತ್ಮಾ ಗಾಂಧಿ

ಇಂದು ಗಾಂಧಿ ಜಯಂತಿ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಮಹತ್ವವಾದ ಪಾತ್ರ ವಹಿಸಿದ, ರಾಷ್ಟ್ರಪಿತನೆನಿಸಿದ ಮೋಹನದಾಸ ಕರಮಚಂದ ಗಾಂಧಿಜೀಯ ಜನ್ಮದಿನ.

ಗಾಂಧಿಯ ಬಗ್ಗೆ ಜನರೆಲ್ಲ ಓದಿ ತಿಳಿದಿದ್ದಾರೆ ಹಾಗೂ ಸಂಶೋಧನೆ ಮಾಡಿದ್ದಾರೆ.ಅವರ ಆದರ್ಶಗಳನ್ನು ಪರಿಪಾಲಿಸಿದ ಗಾಂಧೀವಾದಿಗಳು ಇದ್ದಾರೆ. ಆದರೆ ಗಾಂಧಿಜೀಯ ತದ್ರೂಪಿಯಾಗಿ ಇಲ್ಲಿ ಕೆ. ಸುರೇಂದ್ರ ಬಾಬು ಎನ್ನುವ ಅರವತ್ತೇಳು ವರ್ಷದ ವ್ಯಕ್ತಿಯೊಬ್ಬರು ತಮ್ಮ ಹೊಟ್ಟೆಪಾಡು ನಡೆಸಿದ್ದಾರೆ. ಮೂಲತಃ ಮಂತ್ರಾಲಯದವರಾದ ಇವರುಈ ಗಾಂಧಿಯ ತದ್ರೂಪವನ್ನು ಕಳೆದ ಇಪ್ಪತ್ತಾರು ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದಾರೆ. ಇವರು ಇದೇ ರೂಪಿನಲ್ಲಿ ದೇಶವಿಡೀ ಸಂಚರಿಸಿ ಗಾಂಧೀ ತತ್ವವನ್ನು ಪ್ರಚಾರ ಮಾಡುತ್ತಿದ್ದಾರೆ. ಇದೀಗ ಅವರು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇದ್ದಾರೆ. ಗಾಂಧಿ ತಾತನ ಜನ್ಮದಿನದ ಅಂಗವಾಗಿ ಈ ಚಿತ್ರಗಳನ್ನು ಇಲ್ಲಿ ಹಾಕುವ ಮೂಲಕ , ತಾತನಿಗೆ ನಮ್ಮ ವಿನಮ್ರ ಪ್ರಣಾಮಗಳನ್ನು ಸಲ್ಲಿಸುತ್ತಿದ್ದೇವೆ.

ಇದು ವಿಚಿತ್ರ ಚಿತ್ರವಲ್ಲ ಎಂದು ಸ್ಪಷ್ಟಪಡಿಸಲಿಚ್ಛಿಸುತ್ತೇವೆ.

ಫೋಟೋ ನಮಗೆ ಕಳಿಸಿಕೊಟ್ಟವರು ಪ್ರವೀಣ್ ಉಡುಪ.














Tuesday, September 23, 2008

ವಿಚಿತ್ರ ಕಸದಬುಟ್ಟಿಗಳು - ೧



ಫಲಕೋತ್ಸವದ ಸರಣಿ ಮುಗಿದ ಮೇಲೆ ಈಗ ವಿಚಿತ್ರ ರೀತಿಯ ಕಸದ ಬುಟ್ಟಿಗಳ ಸರಣಿಯನ್ನು ಪ್ರಾರಂಭಿಸುತ್ತಿದ್ದೇವೆ. ಬೇಕಲ್ ಕೋಟೆಯಲ್ಲಿ ಕಂಡ ಈ ವಿಚಿತ್ರ ಫೋಟೋ ಕಳಿಸಿದವರು ಶ್ರೀಕಾಂತ್. ಅದು ಯಾವ ಪುರುಷಾರ್ಥಕ್ಕೆ ಕಸದ ಬುಟ್ಟಿಗೆ ಬಲೆ ಹಾಕಲಾಗಿದೆ ಎಂಬ ರಹಸ್ಯ ಭೇದಿಸಲಾಗಿಲ್ಲ :P

Saturday, September 20, 2008

ಜೇಡರ ಬಲೆ




ಸ್ಲೈಡ್ ಶೋ ಲಿ ಫೋಟೋಗಳು ಸ್ಪಷ್ಟವಾಗಿ ಕಾಣದಿದ್ದರೆ ದಯಮಾಡಿ ಪಿಕಾಸಾ ಲಿಂಕ್ ಅನ್ನು ಕ್ಲಿಕ್ಕಿಸಿ ಪೂರ್ಣ ರೆಸಲೂಷನ್ ನಲ್ಲಿ ನೋಡಿ ಆನಂದಿಸಿ. ಮತ್ತೊಮ್ಮೆ, ಇದು ವಿಚಿತ್ರ ಚಿತ್ರಗಳ ಸ್ಲೈಡ್ ಶೋ ಅಲ್ಲ !

Tuesday, September 16, 2008

ಕಾಗೆಗಳ ಪಾರ್ಟೀ

ಮೊದಲೇ ಹೇಳಿಬಿಡ್ತೀನಿ...ಈ ವಿಡಿಯೋ ವಿಚಿತ್ರ ಅಲ್ಲ. ಇದೊಂಥರಾ ಚೆನ್ನಾಗಿರೋ ವೀಡಿಯೋ. ಇದರಲ್ಲಿ ನಾವು ತುಂಬಾ ಕಲಿಯೋದಿದೆ ಅನ್ನಿಸಿತು ನನಗೆ ಈ ವಿಡಿಯೋ ತೆಗೆಯುವಾಗ. ಕಾಗೆಗಳು ಸತ್ತ ಇಲಿಯನ್ನು ತಿನ್ನುತ್ತಿರುವ ವಿಡಿಯೋ ಇದು. ಇದರಲ್ಲಿ ನಾವು ಗಮನಿಸಬೇಕಾದ ಅಂಶ ಏನೆಂದರೆ, ಒಂದು ಕಾಗೆ ಇಲಿಯ ಮಾಂಸವನ್ನು ಎಳೆದುಕೊಂಡು ಹೋದರೆ, ಬೇರೆ ಕಾಗೆಗಳು ಜಗಳವಾಡದೆ, ಅದನ್ನು ತಿನ್ನುವುದಕ್ಕೆ ಬಿಟ್ಟು, ಅದು ತಿಂದ ಮೇಲೆ ಅವು ಬಾಯಿಹಾಕುತ್ತವೆ. ಆಮೇಲೆ ಅವೆಲ್ಲ round ಹೊಡ್ಕೋತಾ ತಿನ್ನುವುದನ್ನು ನೋಡಲು ಒಂಥರಾ ಮಜವಾಗಿದೆ ! ಪಕ್ಕದ ಮನೆಯ ನಾಯಿಯೊಂದು ರೂಮ್ ನಲ್ಲಿ ಬೊಗಳಿತು. ಅದು ಹೊರಗೆ ಬಂತೆಂದು ತಿಳಿದು ಹೆದರಿ ಪಾಪ ಕಾಗೆಗಳು ಹಾರಿ ಹೋದವು ! ಈ ವಿಡಿಯೋ ನ ತೆಗೆಯುವಾಗ ನನಗೊಂದು ಸುಭಾಷಿತ ನೆನಪಾಯ್ತು :

ಕಾಕ ಆಹ್ವಯತೇ ಕಾಕಾನ್ ಯಾಚಕೋ ನ ತು ಯಾಚಕಾನ್ |
ಕಾಕ ಯಾಚಕಯೋರ್ಮಧ್ಯೇ ವರಂ ಕಾಕೋ ನ ಯಾಚಕಃ ||

ಕಾಗೆಗೆ ಆಹಾರ ಸಿಕ್ಕಿದರೆ ಇತರ ಕಾಗೆಗಳನ್ನು ಆಹ್ವಾನಿಸುತ್ತದೆ, ಆದರೆ ಭಿಕ್ಷುಕನಿಗೆ ಊಟ ಸಿಕ್ಕಿದರೆ ಅವನು ಯಾರನ್ನೂ ಆಹ್ವಾನಿಸುವುದಿಲ್ಲ. ಕಾಗೆ ಮತ್ತು ಭಿಕ್ಷುಕರ ಮಧ್ಯೆ ಕಾಗೆಯೇ ಮೇಲು ಹೊರತು ಭಿಕ್ಷುಕನಲ್ಲ ಎಂಬುದು ಈ ಶ್ಲೋಕದ ತಾತ್ಪರ್ಯ.


Tuesday, September 9, 2008

ನಾಯಿಪಾಡು !




ಇಷ್ಟು ದಿನ ಫಲಕಗಳನ್ನ ನೋಡಿದಿರಿ. ಈಗ ಕೆಲವು ವಿಚಿತ್ರ ಸನ್ನಿವೇಶಗಳ ವೀಡಿಯೋ ನೋಡಿ ಆನಂದಿಸಿ.ವೀಡಿಯೋದಲ್ಲಿ ಪುಟ್ಟ ನಾಯಿ ಮರಿಯೊಂದು ಬಂದೊಡನೆ ಪಾಪ ದೊಡ್ಡ ನಾಯಿಯ ಪಾಡು ನೋಡಿ !

ವಿಡಿಯೋ ಕೃಪೆ : ಪರಿಸರಪ್ರೇಮಿ

Tuesday, September 2, 2008

ಫಲಕೋತ್ಸವ - ೧೦

ಇಷ್ಟು ದಿನ ಬರೀ ತಪ್ಪು ಸ್ಪೆಲ್ಲಿಂಗುಗಳ, ಅಪಾರವಾದ ಅರ್ಥಗಳುಳ್ಳ ಮತ್ತು ಅರ್ಥವೇ ಆಗದಂತಹ ಫಲಕಗಳನ್ನು ಪ್ರದರ್ಶಿಸಿ ಒಂಭತ್ತು ವಾರಗಳ ಫಲಕೋತ್ಸವದ ಪ್ರದರ್ಶನ ನಿಮ್ಮೆಲ್ಲರ ಸಹಕಾರದಿಂದ ಯಶಸ್ವಿಯಾಯ್ತು. ಈ ವಾರದೊಂದಿಗೆ ನಮ್ಮ ಫಲಕೋತ್ಸವದ ಮೊದಲನೆಯ season ಅನ್ನು ಮುಗಿಸುತ್ತಿದ್ದೇವೆ. ಈ ವಾರದ ಚಿತ್ರವನ್ನು ಮೇಲೆ ಹಾಕುವ ಬದಲು ಕೆಳಗೆ ಹಾಕಿದ್ದೇನೆ, ಸ್ವಲ್ಪ "ಭಿನ್ನ" [ :-) ]ವಾಗಿರಲಿ ಅಂತ . ಈ ವ್ಯಕ್ತಿಯ ಕ್ರಿಯಾಶೀಲತೆ ನೋಡಿ ನೀವು ಮೆಚ್ಚದೇ ಇರುವುದಿಲ್ಲ. ಪೈಥಾಗೊರಸ್ಸಿನ ಬಗ್ಗೆ ಕೇಳಿ, ಓದಿ, ಥಿಯೋರಮ್ ಅನ್ನು ಬೈ-ಹಾರ್ಟ್ ಮಾಡಿ ಪಾಸು ಮಾಡಿದ್ದೇವೆ ಅಷ್ಟೆ. ಒಮ್ಮೊಮ್ಮೆ Aptitude testಗಳಲ್ಲಿ ಅದನ್ನು ಬಳಸಿದ್ದೇವೆ . ಆದರೆ ಆ ಹೆಸರು, ಮತ್ತು ಆ ಥಿಯೋರಮ್ ಅನ್ನು ಒಂದು concept-ಆಗಿ ಉಪಯೋಗಿಸಿರುವ ಈ ವ್ಯಕ್ತಿ ನಿಜವಾಗಿಯೂ ಬುದ್ಧಿವಂತನೇ ! ಆದರೆ, ಈ ಫಲಕದಲ್ಲಿ ಕನ್ನಡದಲ್ಲಿ ಪೈಥಾಗೊರಸ್ಸಿನ ಸ್ಪೆಲ್ಲಿಂಗನ್ನು ಬರೆಯುವುದರಲ್ಲಿ ಎಡವಿದ್ದಾನೆ! ಅವನು ಫಲಕದಲ್ಲಿ ಹೇಳಬಯಸುವ ವಿಷಯವನ್ನು ಸರಿಯಾಗಿ ವ್ಯಕ್ತಪಡಿಸಿದ್ದಾನೆ. ಮತ್ತೆ, ಕಲರ್ರು, ಫಾಂಟು, ಎಲ್ಲಾ ಚೆನ್ನಾಗಿದೆ ! ಈ ಬಾರಿ ಇದು ಬರೀ "ವಿಚಿತ್ರ" ಚಿತ್ರವಲ್ಲ,"ವಿಶೇಷ ವಿಚಿತ್ರ " ಚಿತ್ರ .


ನಿಮಗೆಲ್ಲರಿಗೂ ಗೌರಿ ಗಣೇಶರು ಎಲ್ಲವನ್ನೂ "right angle" ಇಂದಲೇ ದಯಪಾಲಿಸಲಿ ಎಂದು ಆಶಿಸುತ್ತೇನೆ. ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಷಯಗಳು.

Tuesday, August 26, 2008

ಫಲಕೋತ್ಸವ -೯

ಫೋಟೋ : ಕೃಪೆ : ಜಯಶಂಕರ್ ಎ.ಎನ್.

ಅವರ ವಿವರಣೆ ಇಂತಿದೆ :
ivaru Printing, Designing, Sign boards maaDthaaranthe.. ee spelling nODidmEle yaaru giraaki sikkilla ansutte :) (athava bartha illa ansutte...)

Tuesday, August 19, 2008

ಫಲಕೋತ್ಸವ-೮

ಮತ್ತೊಂದು ಸ್ಪೆಲ್ಲಿಂಗ್ ಅತ್ಯದ್ಭುತ.
ಫೋಟೋ ಕೃಪೆ : ಜಯಶಂಕರ್ ಎ.ಎನ್.
ವಿವರಣೆ, ಅವರ ಸ್ವಂತ ಪದಗಳಲ್ಲಿ :
"Nitrogen" spelling "Nightrowgin" aagilla sadya...! haage aagididre naanantu Night timealli ellaru row nalli kuthkoMDu gin kuDiyOdu antha artha maaDkotha idde.

Tuesday, August 12, 2008

ಫಲಕೋತ್ಸವ - ೭

ಇದನ್ನು ಓದಿದ ಮೇಲೂ ನಿಮಗೆ ಆಂಗ್ಲ ವ್ಯಾಕರಣ ನೆನಪಿದ್ದರೆ ನೀವು ಆಂಗ್ಲರಿಗೇ ಸ್ಪರ್ಧೆ ಒಡ್ಡಬಹುದು ನೋಡಿ !
ಫೋಟೋ ಕೃಪೆ : ಸಂದೇಶ್. ಎಸ್.

Tuesday, August 5, 2008

ಫಲಕೋತ್ಸವ - ೬

ಮತ್ತೊಂದು ಸ್ಪೆಲ್ಲಿಂಗ್ ಅದ್ಭುತ. ಫೋಟೋವನ್ನು ರಾತ್ರಿಯಲ್ಲಿ ತೆಗೆಯಲಾಗಿರಿವುದರಿಂದ ಅದು ಹೆಚ್ಚು ಸ್ಪಷ್ಟವಾಗಿಲ್ಲ...ಅದರಲ್ಲೇನಿದೆಯೆಂದು ಇಲ್ಲಿ ಬರೆದಿದ್ದೇನೆ. ಸ್ಪೆಲ್ಲಿನ್ಗ್ ಅದ್ಭುತ ಬೋಲ್ಡ್ ಫಾಂಟ್ ನಲ್ಲಿ.

ಆಂಗ್ಲ : ambica mittae mane
ಅರ್ಥ ಆಗಲಿಲ್ಲ ಅಲ್ಲ ?

ಕನ್ನಡದಲ್ಲಿ ಓದಿ :
ಅಂಬಿಕಾ ಮಿಠಾಯಿ ಮನೆ.

ಫೋಟೋ ಕೃಪೆ : ಶ್ರೀಕಾಂತ್

Tuesday, July 29, 2008

ಫಲಕೋತ್ಸವ - ೫

ಕೆಳಗಡೆ ಹಾಕಿರುವುದು "ear care clinic " ಅಂತ. ಆದರೆ ಮೇಲೆ ಅದರ ವಿವರಣೆ "ಶ್ರವಣ ವಾಕ್ ಚಿಕಿತ್ಸಾ ಕೇಂದ್ರ " ???? ಯಾವುದನ್ನ ನಂಬೋದು ಯಾವುದನ್ನ ನಂಬದೇ ಇರುವುದು ?

ಫೋಟೋ ಕೃಪೆ : ಶ್ರೀಕಾಂತ್

Tuesday, July 22, 2008

ಫಲಕೋತ್ಸವ- ೪


ಎಂತಹ ಅತ್ಯದ್ಭುತ spelling-u ನಂಬಿಕೆ ಎಂಬ ಪದಕ್ಕೆ...ಇದನ್ನು ನೋಡಿ ನನ್ನ kay numb ಆಯ್ತು !
ಫೋಟೋ ಕೃಪೆ : ಶ್ರೀಕಾಂತ್

Tuesday, July 15, 2008

ಫಲಕೋತ್ಸವ-೩



weighing machine ಮೇಲಿದ್ದ ಫಲಕ ಇದು.120 ಕೆ.ಜಿ. ಮೇಲಿರುವವರು ಹತ್ತಬೇಡಿ ಅಂತ ಬರ್ದಿದ್ದಾರೆ. ಅಲ್ಲ, ನಾವು weighing machine ಹತ್ತದೆ, 120 ಕೆ. ಜಿ. ಇದ್ದೀವೋ ಇಲ್ಲವೋ ಅಂತ ಹೇಗೆ ಗೊತ್ತಾಗತ್ತೆ ? :P

Tuesday, July 8, 2008

ಫಲಕೋತ್ಸವ - ೨


ಈ ಚಿತ್ರದಲ್ಲಿನ ಬರಹವನ್ನು ಗಮನವಿಟ್ಟು ಓದಿ....ನಗು ಬರದಿದ್ದರೆ ಕೇಳಿ !!

ಫೋಟೋ ಕೃಪೆ : ಶ್ರೀಕಾಂತ್

Tuesday, July 1, 2008

ಫಲಕೋತ್ಸವ - ೧


ವಿಚಿತ್ರ , ಹಾಸ್ಯಮಯ ಮತ್ತು ಅಪಾರವಾದ ಅರ್ಥಗಳುಳ್ಳ ಫಲಕ ಚಿತ್ರಪ್ರದರ್ಶನವೇ ಈ ಫಲಕೋತ್ಸವ. ವಾರಕ್ಕೊಂದು ಹೊಸ ಫಲಕ ಸೇರ್ಪಡೆಯಾಗಲಿದೆ. ಉಡುಪಿಯಲ್ಲಿ ದಿನಪತ್ರಿಕೆ ಮಾರುವ ಅಂಗಡಿಯೊಂದರ ಮುಂದೆ ಕಂಡ ಈ ಫಲಕ ಈ ವಾರದ ಚಿತ್ರ.

ಆ ಫಲಕದ ಮೇಲಿನ ಬರಹ ಇಂತಿದೆ : "ದಿನಪತ್ರಿಕೆಯ ಬಗ್ಗೆ ಚಿಲ್ಲರೆ ಸಹಕಾರ ಕೋರುತ್ತಿದ್ದೇವೆ ದಯವಿಟ್ಟು ಸಹಕರಿಸಿ " !

ಫೋಟೋ ಕೃಪೆ : ಶ್ರೀಕಾಂತ್.

Tuesday, June 24, 2008

ನೀರಿನ ಕೊಳಾಯಿಯಲ್ಲಿ ಕರೆಂಟ್ !


ಅರುಣ್ ಕಳಿಸಿದ ಚಿತ್ರವಿದು. ಚಿತ್ರದಲ್ಲ್ಲಿನ ಬರಹ ಹೀಗಿದೆ : "ಈ ನೀರಿನ ಕೊಳಾಯಿ (tap) ಮುಟ್ಟಬೇಡಿ. ಕರೆಂಟ್ ಪಾಸ್ ಆಗುತ್ತದೆ.
ನೀರಿನ ಕೊಳಾಯನ್ನು ಕರೆಂಟ್ ವೈರ್ ಮಾಡಿರುವ ಈ ಪರಿಯನ್ನು ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಬೆಸ್ಕಾಮ್ ನ ಅದ್ಭುತ ಸಹಯೋಗಗಳಲ್ಲಿ ಒಂದು ಎಂದು ವರ್ಣಿಸಬಹುದೇ ?

Wednesday, June 18, 2008

ಅವಿವಾಹಿತರ ಕನಸು !

ಫೋಟೋ ಕೃಪೆ : ಶ್ರೀನಿವಾಸ ರಾಜನ್

ಅವರ ವಿವರಣೆ ಇಂತಿದೆ !

Idu paper alli odida saalugaLu.. alla, “avivaahitara kanasu sadyadalle nanasaagalide…” anta heLtaaralla… paapa.. vivaahitaru en karma maaDidru anta avarige kanasu nanasaagbaardu? anta


**avivaahitaru kevala vivaahada kanasu hottirtaare antaagli, vivaahitaru maru vivaahada kanasu hottiralla antaagli aa jyotishi assume maaDidre (seems like that after reading this chuTuku) adu avana karmakaanDa, ashte**

Monday, June 9, 2008

black carpet

ಫೋಟೋ ಕೃಪೆ : ಶ್ರೀನಿವಾಸ ರಾಜನ್

ಅವರ ವಿವರಣೆ ಇಂತಿದೆ:
Manglur alli nam mane areadalli ondu banner haaksidru kelavu dinada hinde.. "ee raste durasti maaDi Daambaru haakovaregu matayaachane ge barabEkaada avashyakate illa" anta... 3-e dinadalli rastegella Daambaru haaki vote keLakke niyattaagi bandu nintidru ellara maneya baagila munde.. Aa taraaturiyalli raste ge Daambaru hoDeda reeti idu !

nangeno idu nam area residents ge "black carpet" haasiro thara ide anstu.. Road-u anta anstaane illa.. Ashtu keTTadaagi maaDittiddare

Thursday, May 29, 2008

ದಾರಿ ಯಾವುದಯ್ಯ ?


ಫೋಟೋ ಕಳಿಸಿದ ಶ್ರೀನಿವಾಸರಿಗೆ ಮತ್ತೆ ಧನ್ಯವಾದಗಳು. ಅವರು ಕೊಟ್ಟ ವಿವರಣೆ ಹೀಗಿದೆ :
chikkamagaLur main bus stand munde idda board-u idu. Neighboring oorugaLige directions haakidru. By mistake "Chickmagalur" anta nu entry koTTu direction-uu haaki aamele tamma tappu realize maaDkondu bari arrow maatra tegdiddare.

Tuesday, May 20, 2008

branched tail ಹಲ್ಲಿ !!!


ನಮ್ಮ ಮನೆ ಗೋಡೆ ಮೇಲೆ ಇವತ್ತು ಈ "ವಿಚಿತ್ರ" ವ್ಯಕ್ತಿಯ ವಾಸ್ತವ್ಯ !! ನನ್ನ ಕ್ಯಾಮೆರಾ ಗೆ pose ಕೊಡ್ಬೇಕು ಅಂತಾ ನೇ ಹತ್ತು ನಿಮಿಷ ತಟಸ್ಥವಾಗಿ ನಿಂತಿದ್ದು ನಂತರ ಅದೆಲ್ಲೋ ಮಾಯವಾಗಿಹೋಯ್ತು ಈ "branched tail" ಹಲ್ಲಿ !! ಹಲ್ಲಿಯ ಬಾಲ ಕತ್ತರಿಸಿದರೆ ಬೆಳೆಯುತ್ತೆ ಅಂತ ಮಾತ್ರ ಗೊತ್ತಿತ್ತು...ಆದರೆ ಈ ಥರವೂ ಬೆಳೆಯುತ್ತೆ ಅಂತ ಗೊತ್ತಿರ್ಲಿಲ್ಲ !! ವಿಚಿತ್ರ ಅಲ್ವೇ ?

Tuesday, May 13, 2008

ಎಚ್ಚರಿಕೆ!!!



ಜನ್ಮಜನ್ಮಾಂತರಕ್ಕೂ ಮುಟ್ ನೋಡ್ಕೊಳೋ ಹೊಡೆತ ಅನ್ಸುತ್ತೆ ಈ ಹುಡುಗಂಗೆ.. :-)

Wednesday, May 7, 2008

suggestion box ಇಡೋ ಜಾಗ !!!


ಕ್ಯಾಂಟೀನ್ ಒಂದರಲ್ಲಿ ಕಂಡ ದೃಶ್ಯವಿದು. ಗೋದ್ರೆಜ್ ಬೀರುವಿನ ಮೇಲೆ ಇಟ್ಟಿದ್ದಾರೆ suggestion box ನ ! ಯಾರೂ "ಊಟ ಕೆಟ್ಟದಾಗಿದೆ...ಸರಿ ಮಾಡಿ" ಅಂತ ಬರೆಯಲಿಚ್ಛಿಸಿದರೂ ಬರೆದು ಹಾಕಲು ಸಾಧ್ಯವಾಗದಿರಲಿ ಅಂತ !!!

Friday, May 2, 2008

ನಕ್ಷತ್ರದ ದಿನ ಹಾಗೂ.......



ನೂರು ರೂಪಾಯಿ ಕೊಟ್ಟರೆ, ಏನು ಬೇಕಾದರೂ ಮಾಡ್ತಾರೆ!!

Monday, April 21, 2008

gate ಮುಂದಿನ ಕೆಲವು ಬೋರ್ಡುಗಳು



ಫೋಟೋ ಕಳಿಸಿಕೊಟ್ಟ ಶ್ರೀನಿವಾಸರಿಗೆ ಮತ್ತೊಮ್ಮೆ ಕೃತಜ್ಞಳು. ಮೊದಲನೆಯದು self explanatory ಅನ್ನಿಸಿತು. ಎರಡನೆಯದಕ್ಕೆ ಶ್ರೀನಿವಾಸ ವಿವರಣೆ ಇಂತಿದೆ -
“No Parking in front of the gate” accepted.. aadre aa “gate” na “height” noDi “gate” ellide anta board alli arrow mark haaki torso ashtu level allide adu "

Wednesday, April 16, 2008

ಕಾಗೆಗಳ meeting !!


ಇದು ಲಾಲ್ ಬಾಗ್ ನಲ್ಲಿ ಕಂಡ ದೃಶ್ಯ. ಒಂದು ಕಾಗೆ ಒಂದೇ ಸಮನೆ ಕೂಗ್ತಿತ್ತು....ಇನ್ನೆರಡು ಕಾಗೆಗಳು ಬಂದವೂ ಸಹ, ಆದರೆ ಕಡೆಗೆ ಒಂದು ಕಾಗೆ ಸಭಾತ್ಯಾಗ ಮಾಡಿತು (ಕೆಳಗೆ ಕೂತಿದೆ ) ಮತ್ತೊಂದು ಕಾಗೆ ಮೂತಿ ತಿರುಗಿಸಿಕೊಂಡಿತು !! ಅದೇನು ರಾಜಕೀಯ ಚರ್ಚೆ ನಡೀತಿತ್ತೋ ಏನೋ ಪಾ !! ನನಗೆ ಅರ್ಥವಾಗದಿದ್ದರೂ ಮಜವಂತೂ ಬಂತು !!

Tuesday, April 1, 2008

ಬ್ಲಾಗಲ್ಲಾದ್ರೂ ಇರ್ಲಿ!



ಈ ಚಿತ್ರವನ್ನು ಸೆರೆಹಿಡಿಯಲು ಐಡಿಯಾ ಕೊಟ್ಟ ಶ್ರೀನಿವಾಸ್ ಗೆ ಮತ್ತು ಈ ಫೋಟೋಗಳನ್ನ ಕಳಿಸಿಕೊಟ್ಟ ಶ್ರೀಕಾಂತರಿಗೆ ಅನಂತ ಧನ್ಯವಾದಗಳು. ಇದರ ವಿಶ್ಲೇಷಣೆ ಶ್ರೀಕಾಂತರ ಪದಗಳಲ್ಲಿ -
" ಸಮುದ್ರ ತೀರದಲ್ಲಿ ಕಂಡ ದೃಶ್ಯವಿದು. ಇದನ್ನ ಕೆತ್ತಿರೋದು ರಾತ್ರಿ ಅಲೆಗಳು ಬಂದು ಕೆತ್ತನೆಯನ್ನು ಅಳಿಸಿ ಹೋಗೋ ಜಾಗದಲ್ಲಿ! ಇದನ್ನ ಶ್ರೀನಿವಾಸನಿಗೆ ತೋರ್ಸ್ದಾಗ ಫೋಟೊ ತೆಗ್ದು ಚಿತ್ರ-ವಿಚಿತ್ರ ಬ್ಲಾಗ್-ಗೆ ಹಾಕಕ್ಕೆ ಕಳ್ಸು ಅಂತ ಹೇಳ್ದ. ಪಾಪ, ಕೆತ್ತಿರೋದು ಕಡಲತೀರದಲ್ಲಂತೂ ಉಳಿಯಲ್ಲ. ಬ್ಲಾಗಲ್ಲಾದ್ರೂ ಇರ್ಲಿ!"
ಮತ್ತೊಮ್ಮೆ ಥ್ಯಾಂಕ್ಸ್ ಇಬ್ಬರಿಗೂ !!

Friday, March 28, 2008

ನೀರ್ಕುದುರೆ?

ನೀರಿನಲ್ಲಿ ಜಿಗಿವ ಕುದುರೆ
ದಡದ ಮೇಲೆ ಮಾಡುತಿರುವುದೇನು?
ತಾನು ಕುದುರೆಯೋ ಕಲ್ಲೋ
ನಮ್ಮನೇ ನೋಡುತಿರುವುದೇನು?

Tuesday, March 18, 2008

ಬೆಂಜಮಿನ್ ನನ್ನು ಬೆರಗುಗೊಳಿಸಿದ ಮಿಂಚು !

14 ಮಾರ್ಚ್ ತಾರೀಖು ಬೆಂಗಳೂರಿನಲ್ಲಿ ಮಿಂಚು ಸಹಿತ ಜೋರು ಮಳೆಯೇ ಸುರಿಯಿತು. ಆಗ ತೆಗೆದ ವಿಡಿಯೋ ಇಲ್ಲಿ ಹಾಕಿದ್ದೇನೆ. ಈ ಮಿಂಚಿನ ಹಿಂದೆ ಖ್ಯಾತ ವಿಜ್ಞಾನಿ ಬೆಂಜಾಮಿನ್ ಫ್ರಾಂಕ್ಲಿನ್ ಅವರ ಸ್ವಾರಸ್ಯಕರ ಕತೆ ಇದೆ. ಇವರು ಮಿಂಚಿನಲ್ಲಿ ವಿದ್ಯುಚ್ಛಕ್ತಿ ಇದೆ ಎಂದು ಪ್ರತಿಪಾದಿಸಲು ಗಾಳಿಪಟಕ್ಕೆ ಕೀಲಿಕೈ ಕಟ್ಟಿ ಮಿಂಚು ಬಂದಾಗ ಗಾಳಿಪಟ ಹಾರಿಸಿ ಶಾಕ್ ಹೊಡೆಸಿಕೊಂಡರು ಪಾಪ !! ಪುಣ್ಯವಶಾತ್ ಏನೂ ದುರಂತ ಸಂಭವಿಸಲಿಲ್ಲ. ಮಿಂಚು ಎಷ್ಟೋ ಜನರ, ಮರಗಳ, ಪ್ರಾಣಿಗಳ ಜೀವ ತೆಗೆಯುತ್ತಿದ್ದ ಕಾಲವದು. ಅವರ ಬುದ್ಧಿಶಕ್ತಿ ಮತ್ತು ದೂರದೃಷ್ಟಿಯ ಪ್ರತಿಫಲವೇ "lightening arrestor" .

ಬ್ರಹ್ಮಾಂಡದ ವಿಸ್ಮಯಗಳನ್ನು ನೋಡಲು, ಆನಂದಿಸಲು, ಪರೀಕ್ಷಿಸಲು, ದಾಖಲಿಸಲು ನಾವು ಸದಾ ಮುನ್ನುಗ್ಗಬೇಕಲ್ಲವೆ ?

Tuesday, March 11, 2008

ಯಾರಿಗುಂಟು ನಿನ್ನಾನಂದ?

ಬೆಂಗಳೂರಿನ ರಿಚ್ಮಂಡ್ ಸರ್ಕಲ್ ಬಳಿ ಎಲ್ಲರೂ ಕಾಲಿಗೆ ಚಕ್ರ ಕಟ್ಟಿಕೊಂಡು ಧಾವಿಸುವ ಸಮಯದಲ್ಲಿ ತನ್ನ ಲೋಕದಲ್ಲಿ ಮೈ ಮರೆತಿರುವ ಪುಣ್ಯವಂತ ಮಗು ಇದು.

Saturday, March 1, 2008

It all began with an apple !




ಇದು ಸೇಬು ಹಣ್ಣು ಅಂತ ಎಲ್ಲರ್ಗು ಗೊತ್ತು. ಇದು newton ತಲೆ ಮೇಲೆ ಬಿದ್ದಿದ್ದರಿಂದಲೇ physics ನಲ್ಲಿ ಕ್ರಾಂತಿಯಾಗಿದ್ದು !! ನಾವು " ಧಿಯೋ ಯೋ ನಃ ಪ್ರಚೋದಯಾತ್ " ಅಂತ ಸೂರ್ಯನನ್ನ ಕೇಳುತ್ತೀವಿ ಅಲ್ವ ? newton ನ ಧೀಶಕ್ತಿಯನ್ನು switch on ಮಾಡಲು ಆದಿತ್ಯನು apple ಅನ್ನು ಉಪಯೋಗಿಸಿದ !! ;-)

ಈ apple ನನ್ನ ಕೈಗೆ ಹೇಗೆ ಬಂತು ಅಂತ ಯೋಚಿಸ್ತಿದ್ದೀರ ? newton ತಲೆ ಮೇಲೆ ಬಿದ್ದು ನಂತರ ನೆಲಕ್ಕೆ bounce ಆಗಿ ಬೀಳಬೇಕಿದ್ದ apple ನ ನಾನು catch ಹಿಡಿದೆ ಅಷ್ಟೇ !! ;-)

Friday, February 29, 2008

ಪೆಟ್ರೋಲ್ ಸಿಗದೆ ಹೋದರೆ ....




ಪ್ರಪಂಚದಲ್ಲಿ ಪೆಟ್ರೋಲ್ ಬೆಲೆ ಗಗನ ಮುಟ್ಟಿ, ಕೊನೆಗೊಂದು ದಿನ ಅದು ಮುಗಿದೇ ಹೋಯಿತೆಂದರೆ ನಾವು "back to ಕುದುರೆ ಸವಾರಿ " !!

ನೀವು ಏನೇ ಅನ್ನಿ....ಕುದುರೆ ಮೇಲೆ ಹೋಗೋದೆ ಚೆನ್ನ !!

ಟೊಕ್ ಟೊಕ್ ಟೊಕ್ !!!