Tuesday, February 23, 2010

ಫಲಕೋತ್ಸವ ಸೀಸನ್ ೩-೬


ಏಕವಚನ ಬಹುವಚನಗಳ ಬಗ್ಗೆ ಸಿಕ್ಕಾಪಟ್ಟೆ ಡೌಟು ಇದ್ದ ಹಾಗಿದೆ ಮನುಷ್ಯನಿಗೆ. ರಿಸ್ಕೇ ಬೇಡ ಅಂತ ಎರಡನ್ನೂ ಫಲಕದಲ್ಲಿ ಹಾಕಿಬಿಟ್ಟಿದ್ದಾನೆ. ನೀವು confuse ಆದರೆ ಅದು ನನ್ನ ತಪ್ಪಲ್ಲ :)

ಫೋಟೋ: ಲಕ್ಷ್ಮೀ

Tuesday, February 16, 2010

ಫಲಕೋತ್ಸವ ಸೀಸನ್ ೩-೫

ಇಷ್ಟು ದಿನ ನಾವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಘನಕಾರ್ಯಗಳನ್ನು ನೋಡಿ "ಥತ್" ಎಂದು ಬೈಯ್ಯುತ್ತಿದ್ದೆವು, ಈಗ ಆ ಮಹಾನ್ ಪುಣ್ಯಕಾರ್ಯವನ್ನ ಪಾಲಿಕೆಯೇ ಮಾಡಿಕೊಂಡಿದೆ. ನೋಡಿಬಿಡಿ.

ಫೋಟೋ: ಲಕ್ಷ್ಮೀ

Tuesday, February 9, 2010

ಫಲಕೋತ್ಸವ ಸೀಸನ್ ೩-೪

ತಮ್ಮನ್ನು ತಾವು ಸೋಂಬೇರಿ ಎಂದು ನಮ್ಮಂತೆಯೇ ರಾಜಾರೋಷವಾಗಿ ಹೇಳಿಕೊಳ್ಳುವ ಸಹಬ್ಲಾಗಿಗ ಶ್ರೀನಿಧಿ ಡಿ.ಎಸ್ ಅವರು ನಮಗಾಗಿ ಈ ಫೋಟೋ ಕಳಿಸಿಕೊಟ್ಟಿದ್ದಾರೆ. ಫೋಟೋವನ್ನು ಸಾಂಗವಾಗಿ ನೋಡಿ, ಅದರಲ್ಲಿರುವುದನ್ನ ಜಾಗರೂಕರಾಗಿ ಓದಿ. ಆಗ ನಿಮಗೆ ಅರ್ಥ ಆಗತ್ತೆ ಈ ಫಲಕ ಏನು ಹೇಳಕ್ಕೆ ಹೊರಟಿದೆ ಅಂತ.


Tuesday, February 2, 2010

ಫಲಕೋತ್ಸವ ಸೀಸನ್ ೩- ೩

ಈ ಚಿತ್ರದಲ್ಲಿ ಜಹಂಗೀರು ಜಲೇಬಿಗಳನ್ನು ಸೇರಿಸಿ ಕನ್ನಡ ಭಾಷೆಯ ಲಿಪಿಯನ್ನು ಬರೆಯಲಾಗಿದೆ. ಪ್ರತಿಯೊಂದು ಅಕ್ಷರವೂ ದೇವರಿಗೇ ಪ್ರೀತಿ. ನೋಡಿ, ನಿಮಗೆ ಜಹಂಗೀರು ಜಾಸ್ತಿ ಕಂಡಿತೋ ಜಲೇಬಿ ಜಾಸ್ತಿ ಕಂಡಿತೋ ಹೇಳಿ. :)




ಫೋಟೋ ಕೃಪೆ- ಶಿವಪ್ರಕಾಶ್ ಎಚ್.ಎಮ್.