ಇಷ್ಟು ದಿನ ಬರೀ ತಪ್ಪು ಸ್ಪೆಲ್ಲಿಂಗುಗಳ, ಅಪಾರವಾದ ಅರ್ಥಗಳುಳ್ಳ ಮತ್ತು ಅರ್ಥವೇ ಆಗದಂತಹ ಫಲಕಗಳನ್ನು ಪ್ರದರ್ಶಿಸಿ ಒಂಭತ್ತು ವಾರಗಳ ಫಲಕೋತ್ಸವದ ಪ್ರದರ್ಶನ ನಿಮ್ಮೆಲ್ಲರ ಸಹಕಾರದಿಂದ ಯಶಸ್ವಿಯಾಯ್ತು. ಈ ವಾರದೊಂದಿಗೆ ನಮ್ಮ ಫಲಕೋತ್ಸವದ ಮೊದಲನೆಯ season ಅನ್ನು ಮುಗಿಸುತ್ತಿದ್ದೇವೆ. ಈ ವಾರದ ಚಿತ್ರವನ್ನು ಮೇಲೆ ಹಾಕುವ ಬದಲು ಕೆಳಗೆ ಹಾಕಿದ್ದೇನೆ, ಸ್ವಲ್ಪ "ಭಿನ್ನ" [ :-) ]ವಾಗಿರಲಿ ಅಂತ . ಈ ವ್ಯಕ್ತಿಯ ಕ್ರಿಯಾಶೀಲತೆ ನೋಡಿ ನೀವು ಮೆಚ್ಚದೇ ಇರುವುದಿಲ್ಲ. ಪೈಥಾಗೊರಸ್ಸಿನ ಬಗ್ಗೆ ಕೇಳಿ, ಓದಿ, ಥಿಯೋರಮ್ ಅನ್ನು ಬೈ-ಹಾರ್ಟ್ ಮಾಡಿ ಪಾಸು ಮಾಡಿದ್ದೇವೆ ಅಷ್ಟೆ. ಒಮ್ಮೊಮ್ಮೆ Aptitude testಗಳಲ್ಲಿ ಅದನ್ನು ಬಳಸಿದ್ದೇವೆ . ಆದರೆ ಆ ಹೆಸರು, ಮತ್ತು ಆ ಥಿಯೋರಮ್ ಅನ್ನು ಒಂದು concept-ಆಗಿ ಉಪಯೋಗಿಸಿರುವ ಈ ವ್ಯಕ್ತಿ ನಿಜವಾಗಿಯೂ ಬುದ್ಧಿವಂತನೇ ! ಆದರೆ, ಈ ಫಲಕದಲ್ಲಿ ಕನ್ನಡದಲ್ಲಿ ಪೈಥಾಗೊರಸ್ಸಿನ ಸ್ಪೆಲ್ಲಿಂಗನ್ನು ಬರೆಯುವುದರಲ್ಲಿ ಎಡವಿದ್ದಾನೆ! ಅವನು ಫಲಕದಲ್ಲಿ ಹೇಳಬಯಸುವ ವಿಷಯವನ್ನು ಸರಿಯಾಗಿ ವ್ಯಕ್ತಪಡಿಸಿದ್ದಾನೆ. ಮತ್ತೆ, ಕಲರ್ರು, ಫಾಂಟು, ಎಲ್ಲಾ ಚೆನ್ನಾಗಿದೆ ! ಈ ಬಾರಿ ಇದು ಬರೀ "ವಿಚಿತ್ರ" ಚಿತ್ರವಲ್ಲ,"ವಿಶೇಷ ವಿಚಿತ್ರ " ಚಿತ್ರ .
ನಿಮಗೆಲ್ಲರಿಗೂ ಗೌರಿ ಗಣೇಶರು ಎಲ್ಲವನ್ನೂ "right angle" ಇಂದಲೇ ದಯಪಾಲಿಸಲಿ ಎಂದು ಆಶಿಸುತ್ತೇನೆ. ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಷಯಗಳು.
6 comments:
baraha ದಲ್ಲಿ pythagoras ಅಂತ ಬರೆದು ನೋಡಿ ಗೊತ್ತಾಗತ್ತೆ ಪುಣ್ಯಾತ್ಮನ ಕರಾಮತ್ತು :)
ನಿಮಗೂ ಹಬ್ಬದ ಶುಭಾಶಯಗಳು
ಇಂಥ ಅವಾಂತರಗಳು ಬರಹದಲ್ಲಿ ಸೀದಾ ಇಂಗ್ಲೀಷ್ ಬರೆದು ಕನ್ನಡಕ್ಕೆ ಅನುವಾದಿಸುದರಿಂದಲೇ ಆಗೋದು .
ಫ್ಯ್ಥಗೊರಸ್ ಇಸ್ ಥೆ ಚೊರ್ರೆಚ್ತ್ ಸ್ಪೆಲ್ಲಿನ್ಗ್ ಇನ್ ಬರಹ ದಿರೆಚ್ತ್ ಲನ್ಗುಅಗೆ. ವ್ವ್ಹತ್ ಇಸ್ ಫ಼ುನ್ನ್ಯ್ ಅಬೌತ್ ಇತ್? ಥಿಸ್ ಇಸ್ ನೊತ್ ವಿಚಿತ್ರ ಅತ್ ಅಲ್ಲ್! ಥಿಸ್ ಇಸ್ ಒನ್ಲ್ಯ್ ಚಿತ್ರ.
ವಿಕಾಸ್ ಹೆಗ್ಗಡೆ :
ಬರ್ದೆ...ಗೊತ್ತಾಯ್ತು ! :-) :-)
ಸಂದೀಪ್ ನಾಯಕ್:
ನಿಜ ನಿಜ..
ಶ್ರೀಕಾಂತ್:
ಇ ತೊತಲ್ಲ್ಯ್ ಅಗ್ರೀ ವಿಥ್ ಯೌ ಒನ್ ಥೆ ಪೊಇನ್ತ್ ಥತ್ ಪ್ಯ್ಥಗೊರಸ್ ಇಸ್ ಥೆ ಚೊರ್ರೆಚ್ತ್ ಸ್ಪೆಲ್ಲಿನ್ಮ್ಗ್ ಇನ್ ಬರಹ ದಿರೆಚ್ತ್ ಲನ್ಗುಅಗೆ. ಬುತ್ ಥಿಸ್ ಮನ್ ಅಚ್ತುಅಲ್ಲ್ಯ್ ವನ್ತ್ಸ್ ತೊ ವ್ರಿತೆ ಥೆ ಸ್ಪೆಲ್ಲಿಂಗ್ ಇನ್ ಕನ್ನದ ಅನ್ದ್ ಹಸ್ ನೊತ್ ವ್ರಿತ್ತೆನ್ ಥೆ ಚೊರ್ರೆಚ್ತ್ ಸ್ಪೆಲ್ಲಿನ್ಗ್. ಸೊ, ಥಿಸ್ ಇಸ್ ಅಸ್ ಇ ಸೈದ್, ವಿಶೇಷ ವಿಚಿತ್ರ ಚಿತ್ರ ವಿಥ್ ಒನ್ಲ್ಯ್ ಒನೆ ಸ್ಪೆಲ್ಲಿನ್ಗ್ ವ್ರೊನ್ಗ್ !!
ಸ್ವಲ್ಪ ಅ ಆ ಇ ಈ... ಕಖಗಘಙ ಇತ್ಯಾದಿ ಕಲಿತುಕೊಳ್ಳಬೇಕೆಂದು ಈ ಮೂಲಕ ಬೋರಲಾಗಿದೆ.!!!
ನಮಗಂತೂ ಓದಕ್ಕಾಗ್ತಿಲ್ಲ.... ನೀವೆಲ್ಲಾ ಸೇರಿ ಹೊಸ ಭಾಷೆ ಹುಟ್ಟು ಹಾಕೋದರಲ್ಲಿದ್ದೀರಾ... ಶುಭವಾಗಲಿ.
ರೀ ಲಕ್ಷ್ಮಿ ನಿಮ್ಮ್ ಫಲಕೋತ್ಸವ ಬಹಳ ಚೆನ್ನಾಗಿತ್ತು.. ಇದು ಒಳ್ಳೆ ಫಲಕ..
Post a Comment