Tuesday, September 16, 2008

ಕಾಗೆಗಳ ಪಾರ್ಟೀ

ಮೊದಲೇ ಹೇಳಿಬಿಡ್ತೀನಿ...ಈ ವಿಡಿಯೋ ವಿಚಿತ್ರ ಅಲ್ಲ. ಇದೊಂಥರಾ ಚೆನ್ನಾಗಿರೋ ವೀಡಿಯೋ. ಇದರಲ್ಲಿ ನಾವು ತುಂಬಾ ಕಲಿಯೋದಿದೆ ಅನ್ನಿಸಿತು ನನಗೆ ಈ ವಿಡಿಯೋ ತೆಗೆಯುವಾಗ. ಕಾಗೆಗಳು ಸತ್ತ ಇಲಿಯನ್ನು ತಿನ್ನುತ್ತಿರುವ ವಿಡಿಯೋ ಇದು. ಇದರಲ್ಲಿ ನಾವು ಗಮನಿಸಬೇಕಾದ ಅಂಶ ಏನೆಂದರೆ, ಒಂದು ಕಾಗೆ ಇಲಿಯ ಮಾಂಸವನ್ನು ಎಳೆದುಕೊಂಡು ಹೋದರೆ, ಬೇರೆ ಕಾಗೆಗಳು ಜಗಳವಾಡದೆ, ಅದನ್ನು ತಿನ್ನುವುದಕ್ಕೆ ಬಿಟ್ಟು, ಅದು ತಿಂದ ಮೇಲೆ ಅವು ಬಾಯಿಹಾಕುತ್ತವೆ. ಆಮೇಲೆ ಅವೆಲ್ಲ round ಹೊಡ್ಕೋತಾ ತಿನ್ನುವುದನ್ನು ನೋಡಲು ಒಂಥರಾ ಮಜವಾಗಿದೆ ! ಪಕ್ಕದ ಮನೆಯ ನಾಯಿಯೊಂದು ರೂಮ್ ನಲ್ಲಿ ಬೊಗಳಿತು. ಅದು ಹೊರಗೆ ಬಂತೆಂದು ತಿಳಿದು ಹೆದರಿ ಪಾಪ ಕಾಗೆಗಳು ಹಾರಿ ಹೋದವು ! ಈ ವಿಡಿಯೋ ನ ತೆಗೆಯುವಾಗ ನನಗೊಂದು ಸುಭಾಷಿತ ನೆನಪಾಯ್ತು :

ಕಾಕ ಆಹ್ವಯತೇ ಕಾಕಾನ್ ಯಾಚಕೋ ನ ತು ಯಾಚಕಾನ್ |
ಕಾಕ ಯಾಚಕಯೋರ್ಮಧ್ಯೇ ವರಂ ಕಾಕೋ ನ ಯಾಚಕಃ ||

ಕಾಗೆಗೆ ಆಹಾರ ಸಿಕ್ಕಿದರೆ ಇತರ ಕಾಗೆಗಳನ್ನು ಆಹ್ವಾನಿಸುತ್ತದೆ, ಆದರೆ ಭಿಕ್ಷುಕನಿಗೆ ಊಟ ಸಿಕ್ಕಿದರೆ ಅವನು ಯಾರನ್ನೂ ಆಹ್ವಾನಿಸುವುದಿಲ್ಲ. ಕಾಗೆ ಮತ್ತು ಭಿಕ್ಷುಕರ ಮಧ್ಯೆ ಕಾಗೆಯೇ ಮೇಲು ಹೊರತು ಭಿಕ್ಷುಕನಲ್ಲ ಎಂಬುದು ಈ ಶ್ಲೋಕದ ತಾತ್ಪರ್ಯ.


5 comments:

Harisha - ಹರೀಶ said...

ವರಂ ಕಾಕೋ ನ ಯಾಚಕಃ

ಅಂತಿರ್ಬೇಕಲ್ವಾ?

Lakshmi Shashidhar Chaitanya said...

@ ಹರೀಶ್:

ಧನ್ಯವಾದಗಳು ಹರೀಶ್ ಅವರೇ ! ಟೈಪಿಸುವಾಗ ಆದ ತಪ್ಪನ್ನು ತೋರಿಸಿದ್ದೀರಿ. :-) ಸರಿ ಮಾಡಿದ್ದೇನೆ.

ಅಂತರ್ವಾಣಿ said...

survey maaDidare.. idu sarve saamanya drushya ma... :)

Karthik CS said...

ree bahaLa oLLe video tOrsideeri. adare video jate commentry iddidre innoo chennaagirOdu.. :-D

naavu kalee bEkaaddu bahaLa ide. monne Vijaya Karnatakadalli iruve gaLu mane maaDuvudara bagge koTTiddru. .bahaLa kushi aayutu Odi.

PaLa said...

ಕಾಗೆಯೊಂದಗುಳ ಕಂಡರೆ ಕೂಗಿ ಕರೆಯದೇ ತನ್ನ ಬಳಗನೆಲ್ಲವ..