Friday, April 24, 2020

ಇಷ್ಟು ವರ್ಷಗಳ ನಂತರ ಮತ್ತೊಮ್ಮೆ ನಮಸ್ಕಾರ

ಚಿತ್ರವಿಚಿತ್ರ ಬ್ಲಾಗಿನ ಎಲ್ಲಾ ಓದುಗರಿಗೂ ಇಷ್ಟು ವರ್ಷಗಳ ನಂತರ ನಮಸ್ಕಾರಗಳು, ಈ ಲಾಕ್ ಡೌನ್ ಇಡೀ ಪ್ರಪಂಚಕ್ಕೆ ಬೀಗ ಹಾಕಿಸಿದರೂ, ನನ್ನ ಎಲ್ಲಾ ಬ್ಲಾಗುಗಳ ಕೀಲಿಯನ್ನು ಒಂದೊಂದಾಗಿ ತೆಗೆಸುತ್ತಿದೆ.

ಚಿತ್ರವಿಚಿತ್ರ ಬ್ಲಾಗಿನ ಜೀಮೇಲ್ ಐಡಿಯ ಪಾಸ್ ವರ್ಡ್ ಅನ್ನು ಬಹಳ ವರ್ಷಗಳಿಂದ ನಾನು ಮರೆತುಹೋಗಿದ್ದೆ, ಮತ್ತು ನನ್ನದೇ ಆದ ಕಾರಣಗಳಿಂದ ನಾನು ಬ್ಲಾಗ್ ಮಾಡಲು ಮತ್ತು ಈ ಐಡಿಯನ್ನು ಬಳಸಲು ಸಮಯ ಹೊಂದಿಸಿಕೊಳ್ಳಲು ಆಗಿರಲಿಲ್ಲ. ಈ ಲಾಕ್ ಡೌನ್ ಸಂದರ್ಭದಲ್ಲಿ ನನಗೆ ಸ್ವಲ್ಪ ಸಮಯ ಸಿಕ್ಕಿದ್ದಕ್ಕಾಗಿ, ಒಂದೊಂದೇ ಬ್ಲಾಗನ್ನು ಬರೆಯುತ್ತಾ ಸಾಗುತ್ತಿದ್ದೆ .ಚಿತ್ರವಿಚಿತ್ರ ಬ್ಲಾಗಿನ ಪಾಸ್ ವರ್ಡ್ ರೀಸೆಟ್ ಮಾಡಿದಾಗ ನನಗೆ ಸರಿ ಸುಮಾರು ನೂರ ಅರುವತ್ತು ಸಂದೇಶಗಳು ಬಂದಿದ್ದವು . ಎಲ್ಲದರಲ್ಲಿಯೂ ಕೆಲವು ಅದ್ಭುತ ಛಾಯಾಚಿತ್ರಗಳು ಸಿಕ್ಕವು.

 ಇಷ್ಟು ದಿನ ಆ ಸಂದೇಶಗಳಿಗೆ ನಾನು ಮಾರುತ್ತರವನ್ನು ನೀಡದಿದ್ದುದಕ್ಕಾಗಿ ನಿಮ್ಮೆಲ್ಲರ ಬಳಿ ಕ್ಷಮೆ ಯಾಚಿಸುತ್ತೇನೆ ಮತ್ತು ನೀವು ಕಳುಹಿಸಿದ ಚಿತ್ರಗಳೆಲ್ಲವನ್ನೂ ನಾನು ಅತ್ಯಂತ ಪ್ರೀತಿ ಪೂರ್ವಕವಾಗಿ ಆದರದಿಂದ ಸ್ವೀಕರಿಸುತ್ತಿದ್ದೇನೆ. ಎಲ್ಲಾ ಚಿತ್ರಗಳು ಎಂದಿನಂತೆಯೇ ಪ್ರತಿ ಮಂಗಳವಾರ ಬ್ಲಾಗಿನಲ್ಲಿ ಅಪ್ಡೇಟ್ ಆಗಲಿದೆ. ಮತ್ತೊಮ್ಮೆ ಚಿತ್ರವಿಚಿತ್ರ ಒಂದು ಹೊಸ ರೂಪದಲ್ಲಿ ನಿಮ್ಮ ಮುಂದೆ ಬರಲಿದೆ . ಈಗ ಫೇಸ್ಬುಕ್ ಬಂದಮೇಲೆ ಎಲ್ಲದಕ್ಕೂ ದಿಢೀರ್ ಪ್ರತಿಕ್ರಿಯೆ ದೊರೆಯುವುದರಿಂದ ಯಾರಿಗೂ ಸಹ ಬ್ಲಾಗ್ ಮಾಡುವ ಅಗತ್ಯ ಕಂಡಿಲ್ಲ. ಆದರೆ ಈ ಡೌನ್ ಸಮಯದಲ್ಲಿ ಎಲ್ಲರೂ ಮರಳಿ ಹಳೆಯ ಕೆಲಸಗಳನ್ನು ಮಾಡುತ್ತಿರುವಾಗ, ನಾವು ಮತ್ತೆ ಬ್ಲಾಗ್ ಅತ್ತ ಮುಖ ಮಾಡುವುದು ಸೂಕ್ತ ಎಂದು ನನಗನಿಸುತ್ತದೆ.

ಚಿತ್ರವಿಚಿತ್ರದ ಮುಂದಿನ ರೂಪರೇಷೆಗಳು ಹೇಗಿರಬೇಕು ಎಂಬ ಸಲಹೆಗಳಿಗೂ ಸ್ವಾಗತವಿದೆ . ಚಿತ್ರವಿಚಿತ್ರ ಕ್ಕಾಗಿ ನೀವು ಚಿತ್ರವನ್ನು ಕಳಿಸುವಿರಾದರೆ ಅಥವಾ ಚಿತ್ರವಿಚಿತ್ರ ಬ್ಲಾಗನ್ನು ನೀವು ಮತ್ತಷ್ಟು ಸಮರ್ಪಕವಾಗಿ ನಿರ್ವಹಿಸಬಲ್ಲಿರಾದರೆ ದಯವಿಟ್ಟು chitravichitrablog@gmail.com ಗೆ ಸಂದೇಶವನ್ನು ಕಳುಹಿಸಿ.

ಇಂತಿ ತಮ್ಮ ವಿಶ್ವಾಸಿ ,
ಲಕ್ಷ್ಮಿ

No comments: