Tuesday, December 9, 2008

ಫಲಕೋತ್ಸವ ಸೀಸನ್ ಎರಡು - ೬


ಈ ಚಿತ್ರದಲ್ಲಿ ಅನುಸ್ವಾರ ಮತ್ತು ಅಕ್ಷರ "ಯ" ವನ್ನು ಗಮನಿಸಿ. ಒಂಥರಾ different ಆಗಿ ಬರ್ದಿದಾರೆ. ಈ ಬಾರಿ ಇದು ವಿಶೇಷ ಚಿತ್ರ.

ಫೋಟೋ ಕೃಪೆ: ಅರುಣ್ . ಎಲ್ (ಪರಿಸರಪ್ರೇಮಿ)

7 comments:

Harisha - ಹರೀಶ said...

ನನಗೆ ತಿಳಿಯದಂತೆ ಇದು ಬರೆದವರ ತಪ್ಪಲ್ಲ. ಯಾವುದೋ ಒಂದು ಕಂಪ್ಯೂಟರ್ ತಂತ್ರಾಂಶ ಈ ರೀತಿ ಅನುಸ್ವಾರದ ಬದಲು ಸೊನ್ನೆ ಹಾಕಿ ಲಿಪ್ಯಂತರಣ ಮಾಡುತ್ತದೆ. ಇಂಥ ಹತ್ತಾರು ಫಲಕಗಳನ್ನು ನೋಡಿದ್ದೇನೆ.

kadatagalu said...

ಇದು `ಬರಹ' ತತ್ರಾಂಶ ಉಪಯೋಗಿಸಿ ತಯಾರು ಮಾಡಿದ್ದಿರಬೇಕು. ಅಲ್ಲಿ ಅನುಸ್ವಾರವನ್ನು upper case M ಉಪಯೋಗಿಸಿ ಬರೆಯಬೇಕು, ಆದರೆ ಕೆಲವರು numeric 0 ಉಪಯೋಗಿಸುತ್ತಾರೆ. ಅವರ ಎಣಿಕೆ ಎರಡನೆಯದು ಕೀ ಮಾಡಲು ಸುಲಭ ಎಂದು. `ಯ' ಹೇಗಾಯಿತೋ ತಿಳಿಯದು.
MNS Rao

Ittigecement said...

ವಿಚಿತ್ರವಾಗಿ ಬರೆದದ್ದಂತೂ ನಿಜ......

Shankar Prasad ಶಂಕರ ಪ್ರಸಾದ said...

ರಾವ್ ಸಾರ್,
ಬರಹ ತಂತ್ರಾಂಶ ಬಹಳ ಪರ್ಫೆಕ್ಟ್ ಆಗಿದೆ.
ನಮ್ಮ ಕನ್ನಡದ ಹಾಗೆ.
ಇವನ್ಯಾವೊನೋ ಡಿ.ಟಿ.ಪಿ ಹೈದ ಸರಿಯಾಗಿ ಕಲಿಯದೆ, ಅನುಸ್ವಾರ ಹಾಗು "ಯ" ಅಕ್ಷರಕ್ಕೆ ೦ (ಸೊನ್ನೆ) ಉಪಯೋಗಿಸಿದ್ದಾನೆ. ಇನ್ನು, ಡಿ.ಟಿ.ಪಿ ಗೆ ಇವತ್ತೂ ಸಹಾ ಪ್ರಕಾಶಕ್ ಹಾಗು ಲಿಪಿ ಎನ್ನುವ ತಂತ್ರಾಂಶ ಉಪಯೋಗಿಸುತ್ತಾರೆ. ಇವೆರಡೂ ಯೂನಿಕೋಡ್ ಸಪೋರ್ಟ್ ಕೊಡೋದಿಲ್ಲ ಅನ್ಸುತ್ತೆ.
ಏನಂತೀರಾ ?
ಕಟ್ಟೆ ಶಂಕ್ರ

ಅಂತರ್ವಾಣಿ said...

ಹ ಹ..
ನಾನೂ ಈ ರೀತಿ ಚಿತ್ರಗಳನ್ನು ದಿನ ಪ್ರಯಾಣ ಮಾಡುವಾಗ ನೋಡುತ್ತಾಯಿದ್ದೀನಿ... ಫೋಟೋ ಕ್ಲಿಕ್ಕಿಸೋಕೆ ಆಗೋದಿಲ್ಲ.

ಅನುಸ್ವಾರದ ಬದಲು 0 ಬಳಸಿದ್ದಕ್ಕೆ ಸರಿ. ಆದರೆ ’ಯ’ಕಾರಕ್ಕೆ 0 ಮೂಲಕ ಹೇಗೆ ಬರೆಯುತ್ತಾರೆ?

ಅಂಬಿ ಹೇಳಿದ ಹಾಗೆ ತಂತ್ರಾಂಶದ ದೋಷ.

Santhosh Rao said...

Gol Ghar ಅಂತ ಇದೆ ಬಹುಶಃ Jungle Lodges and Resorts ಅವರ ಯಾವುದೂ ಆಸ್ತಿ ಅಂತ ಕಾಣುತ್ತೆ ??

ಮನಸ್ವಿ said...

ಹರೀಶ ಹೇಳಿದ ಹಾಗೆ ನಂದೂ ಡಿಟ್ಟೋ ಅದ್ರೆ ಒಂದು ಮಾತ್ರ ಬದಲಾಯಿಸಿಕೊಂಡು ಓದಿ.. "ನನಗೆ ತಿಳಿದಂತೆ"!! ;) sorry Harish just kidding, i know its google translators mistake.