ನಾಳೆ ಅಂಬೇಡ್ಕರ್ ಜಯಂತಿ.ದೇಶಕ್ಕೆ ಅವರು ಏನೆಲ್ಲಾ ಮಾಡಿದರು. ಅವರ ಸಾಧನೆ ಶ್ಲಾಘನೀಯ. ಅವರು ನೂರ್ಕಾಲ ಬಾಳಬೇಕಿತ್ತು ಅಂತ ಅನ್ನಿಸುತ್ತದೆಯದರೂ ಈ ಫಲಕವನ್ನು ನೋಡಲು ಅವರು ಇಲ್ಲ ಅನ್ನುವುದು ಸ್ವಲ್ಪ ನೆಮ್ಮದಿ ತರುವ ವಿಷಯ. ಫಲಕದ ಬಗ್ಗೆ ಮಾತಾಡೊಲ್ಲ, ನೋಡಿಬಿಡಿ.
ಈ ಬಾರಿ ವಿಶೇಷ ಫಲಕಗಳ ಕಡೆಗೆ ಗಮನ ಹರಿಸಿದ್ದೇವೆ. ದಾರಿಯಲ್ಲಿ ಮರದ ಮೇಲೆ ಅಂಟಿಸಿರುತ್ತಾರಲ್ಲಾ, ಅಂಥವೌ. ಇದರ ಪ್ರತಿಯೊಂದು ಪದವನ್ನು ಆಸ್ವಾದಿಸಿಕೊಂಡು ಓದಬೇಕು. ಪಾರ್ಟ್ ಟೈಂ ಮತ್ತು ಫುಲ್ ಟೈಂ ಕೆಲಸಗಾರರು ಬೇಕಾಗಿದ್ದಾರೆ ಅನ್ನೋದನ್ನ ಹೇಗೆ ಬರೆದಿದ್ದಾರೆ ನೀವೇ ಓದಿ ಆನಂದಿಸಿ.
ತಮ್ಮನ್ನು ತಾವು ಸೋಂಬೇರಿ ಎಂದು ನಮ್ಮಂತೆಯೇ ರಾಜಾರೋಷವಾಗಿ ಹೇಳಿಕೊಳ್ಳುವ ಸಹಬ್ಲಾಗಿಗ ಶ್ರೀನಿಧಿ ಡಿ.ಎಸ್ ಅವರು ನಮಗಾಗಿ ಈ ಫೋಟೋ ಕಳಿಸಿಕೊಟ್ಟಿದ್ದಾರೆ. ಫೋಟೋವನ್ನು ಸಾಂಗವಾಗಿ ನೋಡಿ, ಅದರಲ್ಲಿರುವುದನ್ನ ಜಾಗರೂಕರಾಗಿ ಓದಿ. ಆಗ ನಿಮಗೆ ಅರ್ಥ ಆಗತ್ತೆ ಈ ಫಲಕ ಏನು ಹೇಳಕ್ಕೆ ಹೊರಟಿದೆ ಅಂತ.
ಈ ಚಿತ್ರದಲ್ಲಿ ಜಹಂಗೀರು ಜಲೇಬಿಗಳನ್ನು ಸೇರಿಸಿ ಕನ್ನಡ ಭಾಷೆಯ ಲಿಪಿಯನ್ನು ಬರೆಯಲಾಗಿದೆ. ಪ್ರತಿಯೊಂದು ಅಕ್ಷರವೂ ದೇವರಿಗೇ ಪ್ರೀತಿ. ನೋಡಿ, ನಿಮಗೆ ಜಹಂಗೀರು ಜಾಸ್ತಿ ಕಂಡಿತೋ ಜಲೇಬಿ ಜಾಸ್ತಿ ಕಂಡಿತೋ ಹೇಳಿ. :)