ಇದಕ್ಕೆ ವಿವರಣೆಯ ಅವಶ್ಯಕತೆ ಇಲ್ಲ ಅನ್ಸತ್ತೆ :)ಫೋಟೋ ಫಾರ್ವರ್ಡ್ ಮಾಡಿದವರು : ರಾಧಾ . ಆರ್ ( ಮೂಲ ಫೋಟೋ ತೆಗೆದವರ ಹೆಸರು ಗೊತ್ತಿಲ್ಲ)
ಬ್ಯೂಟಿ ಪಾರ್ಲರ್ ಗಳಲ್ಲಿ ಇದು "Advanced"ಅಂತೆ. ಪಾರ್ಲರ್ ಸ್ಪೆಲ್ಲಿಂಗನ್ನು ಗಮನಿಸಿ.ಹಾಗೇ...arrow head ತೋರಿಸಿ 44 ಅಂತ ಬರ್ದಿದಾರೆ. ಏನಂತ ಅರ್ಥ ಮಾಡ್ಕೊಬೇಕು ಇದನ್ನ ? 44 ಹೆಜ್ಜೆ ಆದ್ಮೇಲೆ ಪಾರ್ಲರ್ ಅಂತಾನ ? ಅಥ್ವಾ ನಲ್ವತ್ತ್ನಾಲ್ಕನೇ ಬಿಲ್ಡಿಂಗ್ ನಲ್ಲಿ ಈ ಪರ್ಲರ್ ಇದೆ ಅಂತಾನಾ ? ಅಡ್ರೆಸ್ಸೇ ಕೊಡದ ಮಹಾಶಯ ಮೊಬೈಲ್ ನಂಬರ್ರನ್ನು ಕೊಟ್ಟಿರುವುದು ನೋಡಿದರೆ ಜನರು ಫೋನ್ ಮಾಡಿ, ಅಪಾಯಿಂಟ್ಮೆಂಟ್ ತಗೊಂಡೇ ಹೋಗಬೇಕೆನ್ನಿಸುತ್ತದೆ!
ನಮ್ಮ ತಲೆಯ ಬಗ್ಗೆ ಇವರಿಗೆ ಏನು ಕಾಳಜಿ ಏನ್ ಕಥೆ ! ತಲೆ ಹೊಡೆಸಿಕೊಂಡು ಆಸ್ಪತ್ರೆ ಸೇರದಿರಿ ಎಂದು warn ಮಾಡುವ ರೀತಿ ಚೆನ್ನಾಗಿದೆ ಅಲ್ವಾ ? Mind your head ಅಂತೆ...!! ಅಲ್ಲ...ಜನರು ಮೆಟ್ಟಿಲು ಮೇಲೆ ಏನು ಬರೆದಿದ್ದಾರೆ ಎಂದು ನೋಡಿಕೊಂಡು ಹತ್ತದೇ ಇದ್ದರೆ ಈ warning ಉದ್ದೇಶ ಸಾರ್ಥವಾಗದು. ಆದರೂ ಇವರ ಪ್ರಯತ್ನ ಮೆಚ್ಚತಕ್ಕದ್ದು. ಈ ಬಾರಿ ಇದು ವಿಶೇಷ ಫಲಕ.