ಇಂದು ಗಾಂಧಿ ಜಯಂತಿ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಮಹತ್ವವಾದ ಪಾತ್ರ ವಹಿಸಿದ, ರಾಷ್ಟ್ರಪಿತನೆನಿಸಿದ ಮೋಹನದಾಸ ಕರಮಚಂದ ಗಾಂಧಿಜೀಯ ಜನ್ಮದಿನ.
ಗಾಂಧಿಯ ಬಗ್ಗೆ ಜನರೆಲ್ಲ ಓದಿ ತಿಳಿದಿದ್ದಾರೆ ಹಾಗೂ ಸಂಶೋಧನೆ ಮಾಡಿದ್ದಾರೆ.ಅವರ ಆದರ್ಶಗಳನ್ನು ಪರಿಪಾಲಿಸಿದ ಗಾಂಧೀವಾದಿಗಳು ಇದ್ದಾರೆ. ಆದರೆ ಗಾಂಧಿಜೀಯ ತದ್ರೂಪಿಯಾಗಿ ಇಲ್ಲಿ ಕೆ. ಸುರೇಂದ್ರ ಬಾಬು ಎನ್ನುವ ಅರವತ್ತೇಳು ವರ್ಷದ ವ್ಯಕ್ತಿಯೊಬ್ಬರು ತಮ್ಮ ಹೊಟ್ಟೆಪಾಡು ನಡೆಸಿದ್ದಾರೆ. ಮೂಲತಃ ಮಂತ್ರಾಲಯದವರಾದ ಇವರುಈ ಗಾಂಧಿಯ ತದ್ರೂಪವನ್ನು ಕಳೆದ ಇಪ್ಪತ್ತಾರು ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದಾರೆ. ಇವರು ಇದೇ ರೂಪಿನಲ್ಲಿ ದೇಶವಿಡೀ ಸಂಚರಿಸಿ ಗಾಂಧೀ ತತ್ವವನ್ನು ಪ್ರಚಾರ ಮಾಡುತ್ತಿದ್ದಾರೆ. ಇದೀಗ ಅವರು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇದ್ದಾರೆ. ಗಾಂಧಿ ತಾತನ ಜನ್ಮದಿನದ ಅಂಗವಾಗಿ ಈ ಚಿತ್ರಗಳನ್ನು ಇಲ್ಲಿ ಹಾಕುವ ಮೂಲಕ , ತಾತನಿಗೆ ನಮ್ಮ ವಿನಮ್ರ ಪ್ರಣಾಮಗಳನ್ನು ಸಲ್ಲಿಸುತ್ತಿದ್ದೇವೆ.
ಇದು ವಿಚಿತ್ರ ಚಿತ್ರವಲ್ಲ ಎಂದು ಸ್ಪಷ್ಟಪಡಿಸಲಿಚ್ಛಿಸುತ್ತೇವೆ.
ಫೋಟೋ ನಮಗೆ ಕಳಿಸಿಕೊಟ್ಟವರು ಪ್ರವೀಣ್ ಉಡುಪ.
2 comments:
ದಾಸರ ಪದ ಹೇಳ ಬೇಕು...ಗೊತ್ತಲ್ವಾ ನಿನಗೆ?
ಎಲ್ಲರು ಮಾಡುವುದು ಹೊಟ್ಟೆಗಾಗಿ
ಗೇಣು ಬಟ್ಟೆಗಾಗಿ
ತುತ್ತು ಹಿಟ್ಟಿಗಾಗಿ
ಚಿತ್ರಗಳು ಸೂಪರ್, ನಾನೂ ಆವತ್ತು ಕುಕ್ಕೇಲೆ ಇದ್ದೆ. ಅವ್ರನ್ನ ಮಾತೂ ಆಡ್ಸಿದೆ, ಊರು ಪಶ್ಛಿಮ ಗೋಧಾವರಿ ಅಂತ ಹೇಳಿದ್ರು. ಇವ್ರು ಗಾಂಧಿಯ ವೇಷ ತೊಟ್ಟು ೨೦ ಗಂಟೆಗಳಷ್ಟು ಕಾಲ ಪ್ರತಿಮೆಯಂತೆ ನಿಲ್ಲಬಲ್ಲವರು. ಒಂದು ಗಂಟೆಗಳಿಗೊಮ್ಮೆ ಕಾಲನ್ನು ಬದಲಿಸುವುದು ಬಿಟ್ಟರೆ, ಅವರು ಉಸಿರಾಡುವುದೂ ಕೂಡ ಗಮನಿಸುವುದು ಕಷ್ಟ!
Post a Comment