ಕಿವಿಯನ್ನು ಬೋರ್ ವೆಲ್ಲ್ ಮಾಡಿರುವ ಪುಣ್ಯಾತ್ಮನೀತ ! "Ear piercing" ಬದಲು "Ear boring" ಅಂತ ಹಾಕಿದ್ದಾರೆ. ಕನ್ನಡದಲ್ಲಿಯಾದರೂ ಅರ್ಥ ನೆಟ್ಟಗೆ ಬರುವಂತೆ ಬರೆದಿದ್ದಾರಾ ? ಅದೂ ಇಲ್ಲ ! ಕಿವಿಗಳು ಚುಚ್ಚುವ ಸ್ಥಳ ಅಂತೆ! ವಿಭಕ್ತಿ ಪ್ರತ್ಯಯದ ಪಾಠ ಕಲ್ತಿಲ್ಲ ಪಾಪ....ಇದಕ್ಕೆ "ಕರ್ಣಕಾಂಡ" ಎಂಬ ಪದವೇ ಸರಿಯಾದ ವಿವರಣೆಯೇನೋ ಅನ್ನಿಸತ್ತೆ ನನಗೆ !
ಫೋಟೋ ಕೃಪೆ : ಪ್ರವೀಣ್ ಉಡುಪ.
7 comments:
"ಕಿವಿಹಳು" - alla kaNamma.. :)
odi odi kaNNu manjaagirabEku... next time sariyaagi type maaDu..
ಅಹ್ಹಾ..!! ಕನ್ನಡದ ಕೊಲೆ..! ತಾಯಿ ಭುವನೇಶ್ವರಿ ಇವರನ್ನೆಲ್ಲ ಕ್ಷಮಿಸಿ ಬಿಡಮ್ಮ!! ಇಷ್ಟಾದರು ಕನ್ನಡ (ಬೈತಿದ್ದಾರಲ್ಲ) ಕ್ಷಮಿಸ್.. ಬರೆಯುತ್ತಿದ್ದಾರಲ್ಲ !! ಅದಕ್ಕೆ ಹೆಮ್ಮೆ ಪಡಬೇಕೊ..? ಈ ಥರ ಫಲಕಗಳನ್ನು ಬರೆಯುವವರು ಹೆಚ್ಚಾಗಿ ತಮಿಳರು ಅಥವಾ ತೆಲುಗು ಜನ.
ಅಂತರ್ವಾಣಿಳ:
ತಪ್ಪನ್ನು ಸರಿಪಡಿಸಲಾಗಿದೆ.
ಸಿಮೆಂಟು ಮರಳಿನ ಮಧ್ಯೆ:
ನಮಸ್ಕಾರ, ಬ್ಲಾಗ್ ಗೆ ಸ್ವಾಗತ. ಕನ್ನಡವನ್ನು ಕಿಂಚಿತ್ತಾದರೂ ನೋಡಿ ಅಷ್ಟಕ್ಕೇ ತೃಪ್ತಿ ಪಡುವ ಬದಲು ಅವರ ಬಳಿ ಹೋಗಿ ಸರಿಯಾದ ವಿಧಾನದಲ್ಲಿ ಕನ್ನಡವನ್ನು ಬರೆಯಲು ಹೇಳುವುದು ಒಳ್ಳೇದು ಅನ್ನಿಸತ್ತೆ ನನಗೆ. ತಮಿಳಿನವರು, ತೆಲುಗು ನವರು, ಅವರವರ ಭಾಷೆಯಲ್ಲಿ ತಪ್ಪು ಬರೆದಿದ್ದರೆ ಭಾಷೆ ಬರುವ ಜನರು ಸುಮ್ಮನೆ ಬಿಡುತ್ತಿದ್ದರೆ ? ಕನ್ನಡ ಕಂಡಿತಲ್ಲ ಸಾಕು ಎಂಬ ಅಲ್ಪತೃಪ್ತ ಪರಿಸ್ಥಿತಿಯಿಂದ ನಾವು ಮೇಲೆ ಏಳಬೇಕು ಅಲ್ವ ?
ಅಂತಹ ಕೆಟ್ಟ ಫಲಕ ನೋಡಿ ಸುಮ್ಮನಿರಬೇಕೆಂದು ನಾನು ಹೇಳುತ್ತಿಲ್ಲ. ಅಂತಹ ಫಲಕದವರು ಬೇರೆ ಭಾಷಿಕರು ಅಂತ ಹೇಳಿದ್ದೇನೆ.(ಹೆಚ್ಚಿನ ಜನ) ನಾವು ಒಮ್ಮೆ ಬದುಕಲಿಕ್ಕೆ ಅಂತ ತಮಿಳು ನಾಡಿಗೊ ಅಥವಾ ಬೇರೆ ರಾಜ್ಯಗಳಿಗೆ ಹೋಗಬೇಕಾಗಿ ಬಂದಾಗ( ಭಾಷೆಯ) ಅದರ ಕಷ್ಟ ಅರ್ಥ ವಾಗಬಹುದೇನೊ...!! ಇರಲಿ ನಿಮ್ಮ ಪ್ರಯತ್ನಕ್ಕೆ ಅಭಿನಂದನೆಗಳು...ಭಾಷೆಯನ್ನು ಶುದ್ಧವಾಗಿ ಬರೆಯಬೇಕು.. ಒಪ್ಪುವಂಥ ಮಾತು..ಧನ್ಯವಾದಗಳು..
ನಿಮ್ಮ ಮಾತನ್ನೂ ಒಪ್ಪಿದೆ. ಬೇರೆ ಭಾಷಿಕರು ಹೀಗೆ ಬರೆಯುತ್ತಾರೆಂಬುದು ಸರಿ. ನಮ್ಮ ಪ್ರಯತ್ನದ ಉದ್ದೇಶವನ್ನು ಅರ್ಥಮಾಡಿಕೊಂಡಿದ್ದಕ್ಕೆ ನಿಮಗೂ ಧನ್ಯವಾದಗಳು.
ಸದ್ಯ, ಲಕ್ಷ್ಮಿಯವರೇ, ಕವಿಗಳು ಚುಚ್ಚುವ ಸ್ಥಳ ಅಂತ ಹಾಕಿಲ್ಲವಲ್ಲ.
ಚೆನ್ನಾಗಿದೆ ನಿಮ್ಮ ಬ್ಲಾಗ್. ಬೆರಗಿದೆ.
-ರಿಶಿ
ಹ್ಹ ಹ್ಹ್ಹ. ಕಿವಿ ಕೊರೆಯುವ ಸ್ಥಳ ಅಂತನೂ ಹಾಕಿಲ್ಲ ಸದ್ಯ!
Post a Comment